ಬೆಂಗಳೂರು: ಐಷಾರಾಮಿ ಒಂಟಿ ಮನೆಯಲ್ಲಿ ವಾಸವಾಗಿದ್ದ ಮಹಿಳೆ ಕೈ ಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದ ಆರೋಪಿಯನ್ನ ಕೃತ್ಯ ನಡೆದ 24 ಗಂಟೆಯಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡಜಾಲದ ಮಹಿಳೆ ಮನೆಗೆ ರಾತ್ರಿ ವೇಳೆ ಎಂಟ್ರಿ ಕೊಟ್ಟಿದ್ದ ಕಳ್ಳ ರಾಕೇಶ್ ಆ್ಯಂಡ್ ಗ್ಯಾಂಗ್ ಮನೆಯ ಬಾಗಿಲು ತಟ್ಟಿ ಒಳ ಪ್ರವೇಶಿಸಿದ್ದರು ಬಳಿಕ ಮಹಿಳೆ ಕೈ ಕಾಲು ಕಟ್ಟಿ ಹಾಕಿ ಬಾಯಲ್ಲಿ ಬಟ್ಟೆ ತುಂಬಿ ಕ್ರೌರ್ಯ ಮೆರೆದಿದ್ದರು.
ಮನೆಯಲ್ಲಿದ್ದ ಚಿನ್ನಾಭರಣ, ನಗದು ದರೋಡೆ ಮಾಡಿದ್ದ ಆರೋಪಿಗಳ ಬಗ್ಗೆ ಮಾಹಿತಿ ಬಂದ ಕೆಲವೇ ಗಂಟೆಗಳಲ್ಲಿ ಚಿಕ್ಕಜಾಲ ಪೊಲೀಸರು ಆರೋಪಿ ರಾಕೇಶ್ ನನ್ನು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.
Kshetra Samachara
13/11/2021 01:15 pm