ಬೆಂಗಳೂರು ಗ್ರಾಮಾಂತರ: ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಂಧನ ಮಾಡುವಲ್ಲಿ ಆನೇಕಲ್ ಉಪವಿಭಾಗದ ಪೋಲಿಸರು ಯಶಸ್ವಿಯಾಗಿದ್ದಾರೆ. ಹೊರರಾಜ್ಯ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕಾರಂಪಟ್ಟಿ ಗ್ರಾಮದ ಆರೋಪಿ ಶರತ್ ಬಾಬು ಎಂಬಾತನನ್ನು ಜಿಗಣಿ ಪೋಲಿಸರು ಬಂಧಿಸಿದ್ದು, ಆರೋಪಿಯಿಂದ ಬರೋಬ್ಬರಿ 25 ಲಕ್ಕಕ್ಕೂ ಅಧಿಕ ಮೌಲ್ಯದ ಬೆಲೆಬಾಳುವ 32 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಖತರ್ನಾಕ್ ಕಳ್ಳ ಹಗಲಿನ ವೇಳೆಯಲ್ಲಿ ತಮಿಳುನಾಡಿನಿಂದ ಬಂದು ಮನೆಗಳ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಗಮನಿಸಿ ರಾತ್ರಿ ವೇಳೆಯಲ್ಲಿ ಕದ್ದು ಎಸ್ಕೇಪ್ ಆಗುತ್ತಿದ್ದ. ತಮಿಳುನಾಡಿನ ತನ್ನ ಊರಿಗೆ ತೆಗೆದುಕೊಂಡು ಹೋಗಿ ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್ ಗಳನ್ನ ಬದಲಿಸಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ದ್ವಿಚಕ್ರ ವಾಹನಗಳ ಕಳ್ಳತನದ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆ ಪೋಲಿಸರು ವಿಶೇಷ ತಂಡವನ್ನು ರಚನೆ ಮಾಡುವ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಜಿಗಣಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಇದೇ ರೀತಿ ಮತ್ತೊಂದು ದ್ವಿಚಕ್ರ ವಾಹನ ಕಳ್ಳರ ಗ್ಯಾಂಗ್ ನನ್ನು ಬೇಟೆಯಾಡಿರುವ ಬನ್ನೇರುಘಟ್ಟ ಪೋಲಿಸರು ಆರೋಪಿಗಳಾದ ಅಜಯ್, ಮಂಜುನಾಥ್ ಮತ್ತು ಶಿವಕುಮಾರ್ ನನ್ನು ಬಂಧಿಸಿದ್ದು, ಆರೋಪಿಗಳಿಂದ 10 ಲಕ್ಷಕ್ಕೂ ಅಧಿಕ ಮೌಲ್ಯದ 11 ಬೈಕ್ ಹಾಗೂ 18 ಮೊಬೈಲ್ ಪೋನ್ ಗಳನ್ನ ವಶಕ್ಕೆ ಪಡೆದು ಆರೋಪಿಗಳನ್ನ ಜೈಲಿಗೆ ಅಟ್ಟಿದ್ದಾರೆ.
Kshetra Samachara
12/11/2021 03:31 pm