ಬೆಂಗಳೂರಿನ ಜನನೀಬಿಡ ಪ್ರದೇಶವಾದ ಮೈಸೂರು ರಸ್ತೆಯಲ್ಲಿನ ರಚನ ಪೆಟ್ರೋಲ್ ಬಂಕ್ ನಲ್ಲಿ ಪುಡಿ ರೌಡಿಯೊಬ್ಬ ಹಾಡು ಹಗಲೇ ಮಚ್ಚು ಹಿಡಿದು ರಾಬರಿ ಮಾಡಲು ಯತ್ನಿಸಿದ್ದಾನೆ
ಅಡ್ರೆಸ್ ಕೇಳುವ ನೆಪದಲ್ಲಿ ಬಂದಿದ್ದ ಆಗುಂತಕ ಪೆಟ್ರೋಲ್ ಬಂಕ್ ಕ್ಯಾಶಿಯರ್ ಸಿಬ್ಬಂದಿಯನ್ನ ಗುರಿಯಾಗಿಸಿ ಮಚ್ಚು ಬಿಸಿದ್ದಾನೆ, ಕ್ಯಾಶಿಯರ್ ಬ್ಯಾಗ್ ಕಿತ್ತುಕೊಳ್ಳಲು ಹಲವು ಬಾರಿ ಯತ್ನಿಸಿದ್ದಾನೆ,ಲಾಂಗ್ ಬೀಸಿದ್ರು ಬಂಕ್ ಕ್ಯಾಶಿಯರ್ ಕ್ಯಾಶ್ ಬ್ಯಾಗ್ ಬಿಟ್ಟಿಲ್ಲಾ, ಕೊನೆಗೆ ರಸ್ತೆಯಲ್ಲಿ ಎಳೆದಾಡುವಾಗ ಉಳಿದ ಸಿಬ್ಬಂದಿ ಕಲ್ಲೂ ತೂರಿದ್ದಾರೆ ಕೂಡಲೇ ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ,
ಸದ್ಯ ಘಟನೆ ಕುರಿತು ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಂಶಯಾಸ್ಪದ ವ್ಯಕ್ತಿಯನ್ನ ಪೊಲೀಸರು ಈಗಾಗಲೇ ಬಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ
Kshetra Samachara
10/11/2021 04:29 pm