ಪತ್ನಿಯು ತನ್ನ ಗಂಡ ಅಂತಾನೂ ನೋಡದೆ 25 ಮೂಳೆ ಮುರಿಯೋ ಹಾಗೆ ಹೊಡೆದಿರುವ ಘಟನೆಯೊಂದು ನಡೆದಿದೆ.
ಎಲ್ಲಿಯವರೆಗೆ ಮೂಳೆ ಪುಡಿಯಾಗಿದೆ ಅಂದ್ರೆ ಆಪರೇಷನ್ ಮಾಡಿದ್ರೂ ಸರಿ ಆಗೋದು ಡೌಟ್ ಎಂದು ವೈದ್ಯರು ಹೇಳಿದ್ದಾರೆ.
ಪತಿ ಚಂದ್ರನ್ ಮೇಲೆ ಹಲ್ಲೆ ಮಾಡಿದ ಪತ್ನಿ ಅರುಣ್ ಕುಮಾರಿ ನಂತರ ಆತ ಸತ್ತಿದ್ದಾನೆಂದು ಭಾವಿಸಿ ಮನೆ ಲಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ. ನಂತರ ಗಾಯಾಳು ಮೂರು ದಿನಗಳ ಕಾಲ ಮನೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಎಚ್ಚರಗೊಂಡಾಗ ಕಿರುಚಾಡುತ್ತಿದ್ದ ಚಂದ್ರನ್ನನ್ನ ನೋಡಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪತಿ ಪತ್ನಿಯರ ನಡುವೆ ಆಸ್ತಿಗಾಗಿ ಪ್ರತಿದಿನ ಕಾದಾಟ ನಡೆಯುತ್ತಿತ್ತಂತೆ.ಆಸ್ತಿ ಬರೆದುಕೊಡು ಎಂದು ಪ್ರತಿನತ್ಯವೂ ಪತ್ನಿ ಚಂದ್ರನ್ ಗೆ ಕಿರುಕುಳ ನೀಡುತ್ತಿದ್ದಳು ಎಂದು
ಘಟನೆ ಬಗ್ಗೆ ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದಾನೆ ಚಂದ್ರನ್.
ಹೆಂಡತಿ ಹೇಗೆಲ್ಲಾ ಹಲ್ಲೆ ಮಾಡಿದ್ದಾಳೆ ಎಂದು ವಿಡಿಯೋದಲ್ಲಿ ಹೇಳಿರೋ
ಚಂದ್ರನ್ ಗೆ ಈ ಹಿಂದೆಯೇ ಮದುವೆಯಾಗಿತ್ತು, ಅರುಣ್ ಕುಮಾರ್ ಎರಡನೇ ಹೆಂಡತಿ.
ದಂಪತಿಗೆ 15 ವರ್ಷದ ಮಗಳು ಸಹ ಇದ್ದಾಳೆ, ತಾಯಿ ಮಗಳು ಇಬ್ಬರೂ ಸೇರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.
ಚಂದ್ರನ್ ಹೆಸರಲ್ಲಿ ಸುಮಾರು 2 ಕೋಟಿ ಜಮೀನಿದ್ದು, ಅದನ್ನು ತಮ್ಮ ಹೆಸರಿಗೆ ಬರೆದುಕೊಡಿ ಎಂದು ಚಾರ್ಚರ್ ಮಾಡ್ತಿದ್ಲಂತೆ ಹೆಂಡತಿ.ಸದ್ಯ ಮಲ್ಯ ಆಸ್ಪತ್ರೆಯಲ್ಲಿ ಚಂದ್ರನ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸಂಬಂಧ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಅ.9 ರಂದು ಘಟನೆ ನಡೆದಿದ್ರೂ ಇನ್ನೂ ಆರೋಪಿಗಳನ್ನು ಬಂಧಿಸಲಾಗಿಲ್ಲ.
ಸದ್ಯ ನಾಪತ್ತೆಯಾದ ಹೆಂಡತಿ ಹಾಗೂ ಮಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Kshetra Samachara
29/10/2021 06:00 pm