ಬೆಂಗಳೂರು ಹೊಸಕೋಟೆ : ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇನ್ನೇನು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡುವ ಯೋಚನೆಯಲ್ಲಿದ್ದರು. ಆದ್ರೆ ಇತ್ತೀಚೆಗೆ ಯುವತಿ ಮನೆಯವರು ಈ ಪ್ರೀತಿಗೆ ಸಮ್ಮತಿ ನೀಡದೇ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು.
ಇದರಿಂದ ಮನನೊಂದ ಪ್ರಿಯಕರ ಪ್ರೇಯಸಿಯ ಮನೆಗೆ ನುಗ್ಗಿ ತಲೆದಿಂಬಿನಿಂದ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೌದು ಉಷಾಗೌಡ(24) ಹತ್ಯೆಯಾದ ಯುವತಿ ಹೊಸಕೋಟೆ ತಾಲ್ಲೂಕಿನ ಲಿಂಗಧೀರಮಲ್ಲಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂಲತಹ ಅಂಕೋಲಾ ಮೂಲದ ಯುವತಿ ಉಷಾಗೌಡ.
ಇನ್ನು ಗೆಳತಿಯನ್ನು ಹತ್ಯೆಗೈದ ಪ್ರೀಯಕರ ಗೋಪಾಲ ಕೃಷ್ಣ ತರಬಹಳ್ಳಿ ಗ್ರಾಮದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಉಷಾ ಹತ್ಯೆ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆ, ಗೋಪಾಲ ಕೃಷ್ಣ ಆತ್ಮಹತ್ಯೆ ಸಂಬಂಧ ತಿರುಮಲಶೆಟ್ಟಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
27/10/2021 12:14 pm