ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಜಾ ಅಮಲಲ್ಲಿ ಮಕ್ಕಳಿಗೆ ಹಿಂಸೆ : ಬೀಡಿ ಸೇದಿಸಿ ವಿಕೃತ ಮೆರೆದ ಕಿರಾತಕರು

ಬೆಂಗಳೂರು : ಗಾಂಜಾ ಅಮಲಿನಲ್ಲಿರುವ ಪುಂಡರ ಗುಂಪೊಂದು ಏನು ಅರಿಯದ ಪುಟ್ಟ ಕಂದಮ್ಮಗಳ ಮೇಲೆ ಪುಂಡಾಟಿಕೆ ಮೆರೆದಿದ್ದಾರೆ. ತಮ್ಮ ಪಾಡಿಗೆ ತಾವು ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಅಕ್ಷರಶಃ ನರಕ ತೋರಿಸಿದ್ದಾರೆ.

ಈ ದೃಶ್ಯಗಳನ್ನೊಮ್ಮೆ ನೋಡಿ ಮಕ್ಕಳನ್ನು ಮರಕ್ಕೆ ಕಟ್ಟಿಹಾಕಿ ಬೀಡಿ ಸೇದಿಸಿ ವಿಕೃತಮೆರೆದಿದ್ದಾರೆ ಈ ಪುಂಡರು. ಮಕ್ಕಳು ಬೇಡ ನಮ್ಮನ್ನ ಬಿಟ್ಟು ಬಿಡಿ ಎಂದು ಕಣ್ಣೀರು ಹಾಕಿ ಪರಿ ಪರಿಯಾಗಿ ಬೇಡಿಕೊಂಡರು ಯುವಕರು ಕ್ಯಾರೆ ಎಂದಿಲ್ಲ.

ಇನ್ನು ಈ ದುರುಳರು ಮಕ್ಕಳ ಮೇಲೆ ಕ್ರೂರತ್ವ ಎಸಗಿರುವುದಲ್ಲದೇ ಅದನ್ನು ವಿಡಿಯೋ ಮಾಡಿ ಕುಚೇಷ್ಟೆ ಮೆರೆದಿದ್ದಾರೆ. ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಕೆಆರ್ ಪುರಂನ ದೇವಸಂದ್ರ ವಾರ್ಡ್ ನಲ್ಲಿ ನಡೆದ ಘಟನೆ ಇದಾಗಿದೆ

ಆಟ ಆಟವಾಡುತ್ತಿದ್ದ ಮಕ್ಕಳನ್ನುಸುತ್ತುವರೆದ ಯುವಕರ ಗುಂಪೊಂದು ಸತತವಾಗಿ ಒಂದು ಗಂಟೆಗೂ ಅಧಿಕ ಕಾಲ ಒಂದೆಡೆ ಕೂರಿಸಿ ಕೋಲಿನಲ್ಲಿ ಹಲ್ಲೆ ಮಾಡಿರುವುದನ್ನು ರೆಕಾರ್ಡ್ ಮಾಡಿದ್ದಾರೆ.

ಕೃತ್ಯ ಬಳಿಕ ಮಕ್ಕಳು ಕಣ್ಣೀರು ಹಾಕುತ್ತ ಮನೆಗೆ ತೆರಳಿ ಪೋಷಕರಿಗೆ ಮಾಹಿತಿ ಕೊಟ್ಟಿದ್ದಾರೆ. ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
Kshetra Samachara

Kshetra Samachara

25/10/2021 02:10 pm

Cinque Terre

612

Cinque Terre

0

ಸಂಬಂಧಿತ ಸುದ್ದಿ