ಬೆಂಗಳೂರು : ಕಳೆದ ಮೂರು ವರ್ಷದಿಂದ ಯುವತಿಯೊಬ್ಬಳನ್ನು ಲವ್ ಮಾಡುತ್ತಿದ್ದ ಜಿಮ್ ಟ್ರೈನರ್ ನೇಣು ಹಾಕಿಕೊಂಡ ಘಟನೆ ಆರ್ ಆರ್ ನಗರದ ಮಾರಪ್ಪಲೇಔಟ್ ನಲ್ಲಿ ಘಟನೆ ನಡೆದಿದೆ. 29 ವರ್ಷದ ಕಾರ್ತಿಕ್ ಸುಸೈಡ್ ಮಾಡಿಕೊಂಡ ಯುವಕ.ಪ್ರೀತಿಸಿದ ಯುವತಿ ದೂರವಾಗುತ್ತಿದ್ದಂತೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕಾರ್ತಿಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ಈತನ ಲವ್ ವಿಚಾರ ತಿಳಿದ ಪೋಷಕರು ಮದುವೆ ಮಾಡಲು ಮುಂದಾಗಿದ್ದರು. ಹೆಣ್ಣು ನೋಡುವ ಶಾಸ್ತ್ರಕ್ಕೆ ಹೋಗಬೇಕಾದ ಕಾರ್ತಿಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದ ಕಾರ್ತಿಕ್ ಮೊಬೈಲ್ ನ್ನು ಪೊಲೀಸರು ಪಡೆದುಕೊಂಡಿದ್ದಾರೆ.
Kshetra Samachara
25/10/2021 09:08 am