ಬೆಂಗಳೂರು : ಎಟಿಎಮ್ ಗಳಿಗೆ ಕನ್ನ ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಸಮರ್ಜಿತ್ ಸಿಂಗ್, ರಾಜ್ ಕುಮಾರ್ ಬಂಧಿತ ಆರೋಪಿಗಳು ಫ್ಲೈಟ್ ನಲ್ಲೇ ಬಂದು ಓಯೋ ರೂಂನಲ್ಲೇ ಇದ್ದು ಸ್ಕೆಚ್ ಹಾಕಿ ಕೃತ್ಯ ಮಾಡುತ್ತಿದ್ದ ಇವರಿಗೆ ನಗರದ ಪ್ರಮುಖ ಎಟಿಎಮ್ ಗಳೇ ಹಾಟ್ ಸ್ಫಾಟ್ .
ನಗರದ ಉತ್ತರಹಳ್ಳಿಯ ಕೆನರಾ ಬ್ಯಾಂಕ್ ಎಟಿಎಮ್ ಗೆ ಕನ್ನ ಹಾಕಿದ್ದ ಕಳ್ಳರು, ಗ್ಯಾಸ್ ಕಟ್ಟರ್ ಬಳಸಿ ಎಟಿಎಂನಿಂದ ಬರೋಬ್ಬರಿ 17 ಲಕ್ಷ ರೂ ಎಗರಿಸಿ ಎಸ್ಕೇಪ್ ಆಗಿದ್ದರು.
ಈ ಕುರಿತು ಬ್ಯಾಟರಾಯನಪುರ,ಪೀಣ್ಯ ಠಾಣೆಯಲ್ಲಿ ಎಟಿಎಮ್ ದೋಚಿದ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಸುಬ್ರಮಣ್ಯಪುರ ಪೊಲೀಸ್ ಠಾಣೆ ಪೊಲೀಸರು ಕೊನೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Kshetra Samachara
23/10/2021 03:41 pm