ಬೆಂಗಳೂರು: ನ್ಯಾಯವಾದಿಯ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ( ಶುಕ್ರವಾರ) ಬೆಂಗಳೂರಿನಲ್ಲಿ ಸಂಭವಿಸಿದೆ.
ವಕೀಲ ರಾಜೇಶ್ ಅವರ ಪತ್ನಿ ನಿತ್ಯಶ್ರೀ (25) ಮೃತ ದುರ್ದೈವಿ. ಮಂಡ್ಯ ಜಿಲ್ಲೆ ಪಾಂಡವಪುರ ಮೂಲದ ನಿತ್ಯಶ್ರೀ ಜತೆ 2019ರಲ್ಲಿ ರಾಜೇಶ್ ಮದುವೆ ಆಗಿದ್ದರು. ದಂಪತಿಗೆ ಒಂದು ವರ್ಷದ ಹೆಣ್ಣು ಮಗು ಇದೆ.
ಮಗು ಜತೆ ದಂಪತಿ ಬೆಂಗಳೂರಿನ ದ್ವಾರಕಾನಗರದ ಕೃಷ್ಣ ಟೆಂಪಲ್ ಬಳಿ ಮನೆಯೊಂದರಲ್ಲಿ ವಾಸವಿದ್ದರು. ಫ್ಯಾನಿಗೆ ನೇಣುಬಿಗಿದುಕೊಂಡು ನಿತ್ಯಶ್ರೀ ಮೃತಪಟ್ಟಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Kshetra Samachara
22/10/2021 06:19 pm