ಬೆಂಗಳೂರು: ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಇಬ್ಬರು ನಟೋರಿಯಸ್ ಮನೆಗಳ್ಳರನ್ನು ಬಾಣಸವಾಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಾಂಬೆ ಸಲೀಮ್ ತಮ್ಮ ಬಶೀರ್ ಅಲಿಯಾಸ್ ತಮ್ಮು ಮತ್ತು ಆಸೀಫ್ ಅರೆಸ್ಟ್ ಆದ ಆರೋಪಿಗಳು.ಈ ಕಿರಾತಕರು ಪಿಸ್ತೂಲ್ ತೋರಿಸಿ ರಾಬರಿ ಮತ್ತು ಮನೆಗಳ್ಳತನ ಮಾಡುತ್ತಿದ್ದರು. ಪಿಸ್ತೂಲ್ ಮತ್ತು ಜೀವಂತ ಗುಂಡುಗಳ ಸಹಿತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ತಮ್ಮೂ ಹಾಗೂ ಆಸೀಫ್ ವಿರುದ್ಧ ನಗರದ ಹಲವಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮತ್ತು ರಾಬರಿ ಆರೋಪ ದಾಖಲಾಗಿತ್ತು .
ಜನರನ್ನು ಹೆದರಿಸಿ ಹಣೆಗೆ ಪಿಸ್ತೂಲ್ ಇಟ್ಟು ರಾಬರಿ ಮಾಡುವುದು ಇವರ ನಿತ್ಯದ ಕಾಯಕವಾಗಿತ್ತು. ಕಲ್ಕತ್ತಾದಿಂದ ಕಂಟ್ರಿಮೇಡ್ ಗನ್ ತೆಗೆದುಕೊಂಡಿದ್ದ ಇವರು ಯಾರು ಇಲ್ಲದ ಮನೆಯನ್ನು ಗುರುತಿಸಿ ಅಲ್ಲೇ ಕಾರಿನಲ್ಲಿ ಸುತ್ತಾಡಿ ನಂತರ ಅದೇ ಕಾರನ್ನು ಕೃತ್ಯಕ್ಯ ಬಳಸಿಕೊಳ್ಳುತ್ತಿದ್ದರು.
ಬಂಧಿತರಿಂದ ಕೆ.ಜಿಗಟ್ಟಳೆ ಚಿನ್ನದ ಆಭರಣಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದು.ಹಾಗೂ
ತಮ್ಮು ಪ್ರೇಸ್ ಕಾರ್ಡ್ ಮಾಡಿಸಿಕೊಂಡು ಜನರನ್ನು ಯಾಮಾರಿಸುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದಿದೆ. ಇಷ್ಟು ದಿನ
ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಇವರು ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ.
ಬಾಣಸವಾಡಿಯಲ್ಲಿ ಈವರೆಗೆ ಒಟ್ಟು 18 ದರೋಡೆ ಕೇಸ್ ಪತ್ತೆಯಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
Kshetra Samachara
21/10/2021 05:33 pm