ಬೆಂಗಳೂರು: ಪ್ರಿಯತಮೆಗಾಗಿ ನಗರದಲ್ಲಿ ಕಳ್ಳತನ ನಡೆಸಿದ್ದ ಖತರ್ನಾಕ್ ಖದೀಮನನ್ನು ಸಿಲಿಕಾನ್ ಸಿಟಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಜಾನ್ ಪ್ರವೀಣ್ ಅಲಿಯಾಸ್ ಮೂಗು ಮಚ್ಚಿ ಬಂಧಿತ ಖದೀಮ. ಬಂಧಿತನಿಂದ 6.67 ಲಕ್ಷ ಮೌಲ್ಯದ 135 ಗ್ರಾಂ ಚಿನ್ನಾಭರಣ, 90 ಗ್ರಾಂ ಬೆಳ್ಳಿ, 15 ಸಾವಿರ ನಗದು ಹಾಗೂ ಮಕ್ಕಳ ಹುಂಡಿಯ 2,354 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.
ಆರೋಪಿ ಜಾನ್ ಪ್ರವೀಣ್ ಸಣ್ಣ ಸಣ್ಣ ಮನೆಗಳನ್ನೇ ಟಾರ್ಗೆಟ್ ಮಾಡಿ ಕನ್ನ ಹಾಕುತ್ತಿದ್ದ. ಬೀಗ ಹಾಕಿರೋ ಮನೆಗಳನ್ನ ದೋಚಲು ಸಂಚು ರೂಪಿಸುತ್ತಿದ್ದ ಕಿಲಾಡಿ ಅಮೃತಹಳ್ಳಿಯ ಮರಿಯಣ್ಣನ ಪಾಳ್ಯದ ಸೆಕ್ಯೂರಿಟಿ ಗಾರ್ಡ್ ಮನೆಯಲ್ಲಿ ಕಳ್ಳತನ ಮಾಡಿ ಮಕ್ಕಳು ಕೂಡಿಟ್ಟ ಹುಂಡಿ ಹಣವನ್ನೂ ಎಗರಿಸಿದ್ದ. ಪೊಲೀಸರು ಪರಿಶೀಲನೆ ನಡೆಸಿದಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿತ್ತು.
ಜಾನ್ ಪ್ರವೀಣ್ ಯುವತಿಯೋರ್ವಳ ಜೊತೆ ತಮಿಳುನಾಡಿನ ಲಾಡ್ಜ್ ನಲ್ಲಿ ಇರುವ ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತಿದ್ದಂತೆ ದಾಳಿ ನಡೆಸಿದ್ದಾರೆ. ಅದರಂತೆ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Kshetra Samachara
15/10/2021 07:33 pm