ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಿಂದ ನಾಪತ್ತೆಯಾದ ನಾಲ್ವರು ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪತ್ತೆ

ಮಂಗಳೂರು: ಓದಿನಲ್ಲಿ ಆಸಕ್ತಿ‌ ಇಲ್ಲವೆಂದು ಪತ್ರ ಬರೆದು ಬೆಂಗಳೂರಿನ ಒಂದೇ ಪ್ಲ್ಯಾಟ್ ನಿಂದ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.

ಅಮೃತವರ್ಷಿಣಿ(21), ರಾಯನ್ ಸಿದ್ಧಾಂತ್(12), ಭೂಮಿ(12), ಮತ್ತು ಚಿಂತನ್(12) ಪತ್ತೆಯಾದ ವಿದ್ಯಾರ್ಥಿಗಳು. ಓದಿನಲ್ಲಿ ಆಸಕ್ತಿ‌ ಇಲ್ಲವೆಂದು ಒಂದೇ ಅಪಾರ್ಟ್‌ಮೆಂಟ್ ನಿಂದ ನಾಪತ್ತೆಯಾಗಿದ್ದ ಈ ನಾಲ್ವರು ವಿದ್ಯಾರ್ಥಿಗಳು ಮಂಗಳೂರಿನ ಕೆಎಂಸಿ ಜ್ಯೋತಿ ಸಮೀಪ ಪತ್ತೆಯಾಗಿದ್ದಾರೆ.

ವಿದ್ಯಾರ್ಥಿಗಳೆಲ್ಲರನ್ನು ರಕ್ಷಿಸಿರುವ ಮಂಗಳೂರು ದಕ್ಷಿಣ(ಪಾಂಡೇಶ್ವರ) ಪೊಲೀಸ್ ಠಾಣೆಯ ಪೊಲೀಸರು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಸದ್ಯ ಈ ವಿದ್ಯಾರ್ಥಿಗಳನ್ನು ಉಪ್ಪಾರಪೇಟೆ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Edited By : Shivu K
Kshetra Samachara

Kshetra Samachara

12/10/2021 11:01 am

Cinque Terre

1.1 K

Cinque Terre

0

ಸಂಬಂಧಿತ ಸುದ್ದಿ