ದೊಡ್ಡಬಳ್ಳಾಪುರ: ದೇವರ ಪೂಜಾ ಕಾರ್ಯದಲ್ಲಿ ಭಕ್ತರ ನಡುವೆ ತಾರತಮ್ಯ ಮತ್ತು ಭಕ್ತರ ಹುಂಡಿ ಹಣದಲ್ಲಿ ವಂಚನೆ ಹಿನ್ನೆಲೆ ಟ್ರಸ್ಟ್ ನವರು ಆರ್ಚಕನನ್ನ ವಜಾ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ಇಲ್ಲಿಯ ಬಯಲು ಬಸವಣ್ಣ ದೇವಸ್ಥಾನದ ಆರ್ಚಕ ದೇವಾಲಯಕ್ಕೆ ಬಾಗಿಲು ಹಾಕಿ ಭಕ್ತರಿಗೆ ದೇವರ ದರ್ಶನ ಸಿಗದಂತೆ ಮಾಡಿರೋ ಘಟನೆ ಕರೇನಹಳ್ಳಿಯಲ್ಲಿ ನಡೆದಿದೆ.
ಬಯಲು ಬಸವಣ್ಣ ದೇವಸ್ಥಾಕ್ಕೆ ಆರ್ಚಕ ಹೆಚ್.ವಿ. ಕೃಷ್ಣಮೂರ್ತಿ ಬಾಗಿಲು ಹಾಕಿ, ಎರಡು ದಿನದಿಂದ ಭಕ್ತರಿಗೆ ದೇವರ ದರ್ಶನ ಸಿಗದಂತೆ ಮಾಡಿದ್ದರು.ಆರ್ಚಕನ ವರ್ತನೆಯಿಂದ ಬೇಸತ್ತ ಭಕ್ತರು, ಬೀಗ ರಿಪೇರಿ ಮಾಡುವನಿಂದ ದೇವಸ್ಥಾನದ ಬಾಗಿಲು ತೆಗೆಸಿ ದೇವರ ದರ್ಶನ ಪಡೆದರು.
ಬಯಲು ಬಸವಣ್ಣ ದೇವಸ್ಥಾನದ ಸೇವಾ ಟ್ರಸ್ಟ್ ನವರು 11 ವರ್ಷಗಳ ಹಿಂದೆ ಗೌರಿಬಿದನೂರು ಮೂಲದ ಹೆಚ್ ವಿ ಕೃಷ್ಣಮೂರ್ತಿಯನ್ನ ಆರ್ಚಕನನ್ನಾಗಿ ನೇಮಿಸಿದರು. ದಿನ ಕಳೆದಂತೆ ಆರ್ಚಕ ದೇವಸ್ಥಾನವನ್ನು ತನ್ನ ಸ್ವತ್ತು ಎಂಬಂತೆ ವರ್ತಿಸತೊಡಗಿದ್ದಾರೆ. ದೇವಾಸ್ಥಾನಕ್ಕೆ ಬರುವ ಭಕ್ತರ ನಡುವೆ ತಾರತಮ್ಯ ಮಾಡ ತೋಡಗಿ, ಹಣ ಕೊಟ್ಟವರಿಗೆ ಮಾತ್ರ ಪೂಜೆ ಮಾಡಿಸೋದು, ಕೊಡದೇ ಇದ್ದವರಿಗೆ ಪೂಜೆ ಮಾಡಿಸೋ ಮಾತೇ ಇಲ್ಲ. ಟ್ರಸ್ಟ್ ನವರ ಗಮನಕ್ಕೂ ತರದೆ ಮುಜರಾಯಿ ಇಲಾಖೆ ಅಧಿಕಾರಿಗಳನ್ನ ಕರೆದು, ಅರ್ಚಕರು ಹುಂಡಿ ಹಣ ಎಣಿಕೆ ಮಾಡಿದ್ದಾರೆ ಅಂತಲೂ ಟ್ರಸ್ಟ್ ಗಂಭೀರ ಆರೋಪ ಮಾಡಿದೆ.
ಬಯಲು ಬಸವಣ್ಣ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸರ್ವೆ ನಂಬರ್ 54 ರಲ್ಲಿ 37 ಗುಂಟೆ ಜಮೀನು ಇದ್ದು, ಒಂದು ವೇಳೆ ಟ್ರಸ್ಟ್ ಮುಜರಾಯಿ ಇಲಾಖೆಗೆ ಸೇರಿದರೆ ಇಡೀ ದೇವಸ್ಥಾನ ತನ್ನ ವಶಕ್ಕೆ ಬರುತ್ತೆ ಎಂದು ಟ್ರಸ್ಟ್ ವಿರುದ್ಧ ಸುಳ್ಳು ದೂರು ನೀಡಿದ್ದಾರೆಂದು ಅರ್ಚಕನ ವಿರುದ್ಧ ಟ್ರಸ್ಟ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
24/02/2022 08:22 pm