ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ದೇವರಿಗೆ ಬಿಟ್ಟಿದ್ದ 2 ಮೇಕೆ ಕದ್ದ ಕಳ್ಳರು

ದನದ ಕೊಟ್ಟಿಗೆಯ ಬೀಗ ಒಡೆದು ಗ್ರಾಮ ದೇವತೆಗೆ ಬಿಟ್ಟಿದ್ದ ಎರಡು ಮೇಕೆಗಳನ್ನ ಕದ್ದ ಘಟನೆ ದೊಡ್ಡಬಳ್ಳಾಪುರ ಮಧುರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಬೈರೇಗೌಡರಿಗೆ ಸೇರಿದ ಎರಡು ಮೇಕೆಗಳನ್ನ ಕಳ್ಳರು ಕದ್ದೊಯ್ದಿದ್ದಾರೆ, ಬೈರೇಗೌಡರ ಮನೆ ರಸ್ತೆ ಬದಿಯಲ್ಲಿದ್ದು, ಅದರ ಪಕ್ಕದಲ್ಲಿಯೇ ದನದ ಕೊಟ್ಟಿಗೆ ಇದೆ.

ಊರಿನಲ್ಲಿ ನಡೆಯುತ್ತಿದ್ದ ಪಟಾಲಮ್ಮ ಮತ್ತು ಪಳಕಮ್ಮ ದೇವಿ ಜಾತ್ರೆಗೆ ಹರಕೆ ತಿರಿಸಲು ಎರಡು ಮೇಕೆಗಳನ್ನು ಬಿಡಲಾಗಿತ್ತು, ಆದ್ರೆ ಮಧ್ಯರಾತ್ರಿ ಕಾರಿನಲ್ಲಿ ಬಂದಿದ್ದ ಕಳ್ಳರು ದನದ ಕೊಟ್ಟಿಗೆಯ ಬೀಗ ಒಡೆದು ಎರಡು ಮೇಕೆಗಳನ್ನ ಕದ್ದೊಯ್ದಿದ್ದಾರೆ.

ಇನ್ನು ಮಧುರನಹೊಸಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ನಾಲ್ಕನೇ ಕಳ್ಳತನ ಪ್ರಕರಣ ಇದಾಗಿದ್ದು, ಕಳ್ಳರ ಚಳಕಕ್ಕೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

27/08/2022 01:16 pm

Cinque Terre

30.88 K

Cinque Terre

0

ಸಂಬಂಧಿತ ಸುದ್ದಿ