ದಾಸರಹಳ್ಳಿ: ಈ ಸೀನ್ ನೋಡಿದ್ರೆ ದರ್ಶನ್ ಅಭಿನಯದ ಕರಿಯ ಸಿನಿಮಾ ನೆನಪಾಗುತ್ತೆ. ಕರಿಯ ಓಪನಿಂಗ್ ಸೀನ್ ನಲ್ಲೂ ಕರಿಯ ರೌಡಿಯನ್ನ ಕೊಂದು ಹೆಗಲ ಮೇಲೆ ಹಾಕೊಂಡು ಹೋಗ್ತಿರ್ತಾನೆ. ಈ ಸೀನ್ ನಲ್ಲೂ ಹಾಗೇ ಡ್ರ್ಯಾಗರ್ ನಿಂದ ಇರಿದು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾನೆ. ಅಂದಹಾಗೆ ಇವನ ಹೆಸ್ರು ಮುನಿ@ಮುನಿರಾಜ.
ಈ ಘಟನೆ ನಡೆದಿರೋದು ನಗರದ ಹೆಗ್ಗನಹಳ್ಳಿ ಕ್ರಾಸ್ ಬಳಿ. ಸೂರಿ ಚಾಕು ಇರಿತಕ್ಕೊಳಗಾದ ಯುವಕ. ಸೂರಿ ಸ್ನೇಹಿತ ಮುನಿ ಜೊತೆ ಕಿರಿಕ್ ಮಾಡಿಕೊಂಡಿದ್ದ. ಹಾಗೇ ಮುನಿಗೆ ವಾರ್ನ್ ಮಾಡೋಕಂತ ಸೂರಿ ಡ್ರ್ಯಾಗರ್ ಸಮೇತ ಬಂದಿದ್ದ. ಈ ವೇಳೆ ಜಗಳ ಕೈ ಕೈ ಮಿಲಾಯಿಸೋ ಹಂತಕ್ಕೆ ಹೋದಾಗ ಸೂರಿ ಡ್ರ್ಯಾಗರ್ ಹಿಡಿದು ಮುನಿಗೆ ಹೊಡೆಯಲು ಮುಂದಾದಾಗ ಅದೇ ಡ್ರ್ಯಾಗರ್ ನಿಂದ ಮುನಿ ಸೂರಿಗೆ ಚುಚ್ಚಿದ್ದ.
ಪ್ರಜ್ಞೆ ತಪ್ಪಿದ ಸೂರಿಯನ್ನ ಹೆಗಲ ಮೇಲೆ ಹಾಕೊಂಡು ಸುಮಾರು ಅರ್ಧ ಕೀ.ಮೀ ದೂರದಲ್ಲಿರೋ ಆಸ್ಪತ್ರೆ ಬಳಿ ಮುನಿ ಬಂದಿದ್ದ. ಪೊಲೀಸ್ರಿಗೆ ವಿಷಯ ಗೊತ್ತಾಗಿದೆ ಅಂತ ಆಸ್ಪತ್ರೆ ಬಾಗಿಲಲ್ಲೇ ಸೂರಿಯನ್ನ ಮಲಗಿಸಿ ಎಸ್ಕೇಪ್ ಆಗೋಗೆ ಟ್ರೈ ಮಾಡಿದ್ದ ಮುನಿಯನ್ನ ರಾಜಗೋಪಾಲ ನಗರ ಪೊಲೀಸ್ರು ಬಂಧಿಸಿದ್ರು. ಕಳೆದ 18 ರಂದು ನಡದ ಘಟನೆಯ ಲೈವ್ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
Kshetra Samachara
21/04/2022 05:41 pm