ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಟಿಎಂ ಜೊತೆಗೆ ಸಿಸಿಟಿವಿ ಡಿವಿಆರ್ ಕೂಡ ದೋಚಿದ ಕಳ್ಳರು

ಬೆಂಗಳೂರು:ಹೈವೇ ರೋಡ್ ನಲ್ಲಿ ಎಟಿಎಂ ದೋಚಿರೋ ಘಟನೆ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ಚಿಕ್ಕಗೊಲ್ಲರಹಟ್ಟಿಯ ಎಸ್ ಬಿಐ ಎಟಿಎಂ‌ನಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.ಮೊನ್ನೆ ರಾತ್ರಿ ಘಟನೆ ನಡೆದಿದ್ದು, ಮುಂಜಾನೆ‌ ಹೌಸ್ ಕೀಪಿಂಗ್ ಸ್ಟಾಫ್ ಬಂದಗಾ ಪ್ರಕರಣ ಬೆಳಕಿಗೆ ಬಂದಿದೆ. ಕಟರ್ ನಿಂದ ಎಟಿಂಎ ಮಶಿನ್ ಕಟ್ ಮಾಡಿ ಮಶಿನ್ ಕದ್ದಿದ್ದಾರೆ.‌ಇದ್ರೆ ಜೊತೆಗೆ ಸಿಸಿಟಿವಿಯಲ್ಲಿ ಲಾಕ್ ಆಗ್ತಿವಿ ಅನ್ನೋ ಭಯಕ್ಕೆ ಎಟಿಎಂನಲ್ಲಿದ್ದ ಸಿಸಿಟಿವಿ ಡಿವಿಆರ್ ನೂ ಕಟ್ ಮಾಡಿಕೊಂಡು ಕಳ್ಳರು ಎಸ್ಕೇಪ್ ಆಗಿದ್ದಾರೆ.

ಇನ್ನೂ ಕಳ್ಳತನ ಮಾಡಿ ಸ್ಮಾಶಮದಲ್ಲಿ ಎಟಿಎಂ ಮಶಿನ್ ನನ್ನು ಕಳ್ಳರು ಬಿಸಾಡಿದ್ದಾರೆ.‌ ಮಶಿನ್ ನಲ್ಲಿದ್ದ ಹಣ ಎತ್ತಿಕೊಂಡು ಖಾಲಿ ಮಶಿನ್ ಎಸೆದಿದ್ದಾರೆ. ಕದ್ದ ವಾಹನದಲ್ಲಿ ಮಶಿನ್ ಕದ್ದಿರುವ ಶಂಕೆ ವ್ಯಕ್ತವಾಗಿದ್ದು ಮಾದನಾಯಕನಹಳ್ಳಿ ಪೊಲೀಸ್ರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

Edited By :
Kshetra Samachara

Kshetra Samachara

16/04/2022 05:16 pm

Cinque Terre

5.96 K

Cinque Terre

0

ಸಂಬಂಧಿತ ಸುದ್ದಿ