ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ನಿವೃತ್ತಿ ನಂತರ ಡೈವೋರ್ಸ್; ಕಾಡಿದ ಪುತ್ರನ ನೆನಪು, ಹಿರಿಜೀವ ಆತ್ಮಹತ್ಯೆಗೆ ಶರಣು

ನಿವೃತ್ತಿ ನಂತರ ಮಡದಿ-‌ ಮಗನ ಜೊತೆ ಹಿರಿಯಜೀವ ವಿಶ್ರಾಂತ ಜೀವನ ಸಾಗಿಸಬೇಕಿತ್ತು. ಆದರೆ, ಡೈವೋರ್ಸ್ ಪಡೆದು ಕುಟುಂಬದಿಂದ ದೂರವಾಗಿ, ಏಕಾಂತದ ವೇದನೆ ಅನುಭವಿಸುತ್ತಿದ್ದರು. ಇದೀಗ ಮಗನ ತೊರೆದ ನೋವು ತಾಳಲಾರದೆ ಅಪಾರ್ಟ್‌ ಮೆಂಟ್ ‌ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇವರು ಉತ್ತರಭಾರತ ಮೂಲದ ರಾಜೀವ್ ಚತುರ್ವೇದಿ. ನಿವೃತ್ತಿ ಪಡೆದು 2 ವರ್ಷ ಆಗುವ ಮೊದಲೇ ಇಹಲೋಕ‌ ತ್ಯಜಿಸಿದ್ದಾರೆ. IRS ಪದವೀಧರ 62ರ ಹರೆಯದ ರಾಜೀವ್ ಯಲಹಂಕದ ಸಿಂಗನಾಯಕನಹಳ್ಳಿಯ ಗೋದ್ರೇಜ್ ಅಪಾರ್ಟ್ ಮೆಂಟ್‌ ಫ್ಲ್ಯಾಟ್‌ ನಲ್ಲಿ ಒಬ್ಬರೇ ವಾಸವಿದ್ದರು.

ಯಲಹಂಕದ ವ್ಹೀಲ್ & ಆಕ್ಸೆಲ್ ಕಂಪನಿಯಿಂದ ನಿವೃತ್ತರಾಗಿದ್ದ ಅವರು, ಹೆಂಡತಿಗೆ ಡೈವೋರ್ಸ್ ನೀಡಿ ಮಗನಿಂದಲೂ ದೂರ ಆಗಿದ್ದರು. ನಂತರ ಮತ್ತೊಂದು ಮದುವೆ ಆಗಿ, ಖಾಸಗಿ ಕಂಪೆನಿಲಿ ಪ್ರಿನ್ಸಿಪಲ್ ಚೀಪ್ ಆಫೀಸರ್ ಆಗಿದ್ದರು. ಅದೇನಾಯ್ತೊ ಏನೋ ಏಕಾಂತ ಜೀವನದಿಂದ ಬೇಸತ್ತು ಇಂದು ಬೆಳಗ್ಗೆ7ರ ಸುಮಾರಿಗೆ 10ನೇ ಮಹಡಿ ಟೆರೇಸ್ ನಿಂದ ಬಿದ್ದು ಜೀವ ಬಿಟ್ಟಿದ್ದಾರೆ. ಈ ದೃಶ್ಯ CC TV ಯಲ್ಲಿ ಸೆರೆಯಾಗಿದೆ.

ಅಪಾರ್ಟ್‌ ಮೆಂಟ್ ನ 5ನೇ ಫ್ಲೋರ್ ನ‌ಲ್ಲಿದ್ದ ರಾಜೀವ್, ಇಲ್ಲಿ 4 ತಿಂಗಳಿಂದ ಒಬ್ಬರೇ ವಾಸವಿದ್ದರು. ಉತ್ತರ ಭಾರತದಲ್ಲಿ ಸ್ವಂತ ಮನೆಕಟ್ಟಿಸಿ ಮೊದಲ ಹೆಂಡತಿ -ಮಗನಿಗೆ ಬಿಟ್ಟು ಬಂದಿದ್ದರು. ನಂತರ 2ನೇ ಮದುವೆಯಾದರೂ ಒಂಟಿಯಾಗಿದ್ದರು. ಮಗನ ಜೊತೆ ಜೀವನದ ಕೊನೆ ದಿನ ಕಳೆಯಬೇಕೆಂಬ ಮಹದಾಸೆನ ಸ್ನೇಹಿತರ ಬಳಿ ಹಂಚಿಕೊಂಡಿದ್ದರು. 2ನೇ ಪತ್ನಿಯಿಂದಲೂ ಏಕೆ ದೂರವಾಗಿದ್ದರೋ ಗೊತ್ತಿಲ್ಲ. ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Edited By :
PublicNext

PublicNext

26/03/2022 10:40 am

Cinque Terre

35.34 K

Cinque Terre

1

ಸಂಬಂಧಿತ ಸುದ್ದಿ