ಆನೆದಂತ ಕದ್ದ ಚೋರರನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಐದು ಅಡಿಗೂ ಉದ್ದವಿರೋ ಎರಡು ಆನೆದಂತಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಮೂರು ಜನ ಆರೋಪಿಗಳು ಸಿಕ್ಕಿಬಿದ್ದಿದ್ದು, ಚಂದ್ರೇಗೌಡ , ಸೋಮಲಿಂಗಪ್ಪ ಮತ್ತು ಪ್ರವೀಣ್ ಬಂದಿತ ಆರೋಪಿಗಳು.
16 ಕೆಜಿ ಮತ್ತು 13 ಕೆಜಿಯ ಎರಡು ಆನೆ ದಂತಗಳನ್ನು ಸೀಜ್ ಮಾಡಿದ್ದಾರೆ. ಇನ್ನು ಈ ದಂತಗಳನ್ನು ಹಾವೇರಿ ಜಿಲ್ಲೆ ನಿವಾಸಿ ಸೋಮಶೇಖರಪ್ಪ, ಪ್ರವೀಣ್ ಗುಳೇದ್ ಮತ್ತು ಹಾಸನದ ಚಂದ್ರೇಗೌಡ ಸೇರಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಬಳಿ ಇರುವ ವಿದ್ಯಾವಾಹಿನಿ ಸ್ಕೂಲ್ ಗೇಟ್ ಮುಂದಿನ ಸ್ಥಳದಲ್ಲಿ ಟಾಟಾ ಇಂಡಿಕಾದಲ್ಲಿ ಬಚ್ಚಿಟ್ಟಿದ್ದರು. ಬಹುತೇಕ ಸಿಕೆ ಅಚ್ಚುಕಟ್ಟು ಬಳಿ ಹೆಚ್ಚಾಗಿ ವನ್ಯಜೀವಿ ಕಾಯ್ದೆಯ ಪ್ರಕರಣಗಳೇ ಹೆಚ್ಚಿರುವ ಕಾರಣ ಪೊಲೀಸರು ಪ್ರತಿಯೊಬ್ಬರ ಮೇಲೆ ತಮ್ಮ ಬಾತ್ಮೀದಾರರ ಮೂಲಕ ಹದ್ದಿನ ಕಣ್ಣಿಟ್ಟಿದ್ದರು. ಹೀಗಾಗಿ ಮೂವರು ಆರೋಪಿಗಳು ಅರೆಸ್ಟ್ ಆಗಿದ್ದಾರೆ.
1972 ವನ್ಯಜೀವಿ ಕಾಯ್ದೆಯಡಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ಇನ್ನು ಈ ದಂತ ಎಲ್ಲಿಂದ ತಂದಿದ್ದು, ಎಂಬುದರ ಬಗ್ಗೆ ಚೆನ್ನಮ್ಮನ ಕೆರೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
PublicNext
19/03/2022 06:14 pm