ಕಿರುತೆರೆ ನಟಿ ನಿರೂಷಾ ಅವರ ಮುದ್ದಿನ ನಾಯಿ ಮರಿಯನ್ನು ಕಿಲಾಡಿ ಜೋಡಿಯೊಂದು ಕದ್ದಿದ್ದು ನಟಿ ನಾಯಿಗಾಗಿ ಹುಡುಕಾಟ ನಡೆಸುತ್ತಿರುವ ಘಟನೆ ನಾಗರಭಾವಿಯಲ್ಲಿ ನಡೆದಿದೆ.
ಹೆಣ್ಣು ನಾಯಿಮರಿ ಮನೆ ಹೊರಗೆ ಆಟವಾಡುತ್ತಿರುವಾಗ ಅಲ್ಲಿಗೆ ಟೂ ವೀಲರ್ ನಲ್ಲಿ ಬಂದ ಜೋಡಿಯೊಂದು ನಾಯಿಯನ್ನು ಕದ್ದು ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಸಿಟ್ಜೂ ಜಾತಿಯ ಎಂಟು ವರ್ಷದ ಹೆಣ್ಣು ನಾಯಿಗೆ ಸರಿಯಾಗಿ ಕಣ್ಣು ಕೂಡ ಕಾಣಿಸುವುದಿಲ್ಲವಂತೆ. ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
26/07/2022 08:09 pm