ರಸ್ತೆ ಅಪಘಾತಗಳು ಆಗ್ತಾನೆ ಇರುತ್ತೆ. ಆದ್ರೆ ಆಕ್ಸಿಡೆಂಟ್ ಆದ್ಮೇಲೆ ಅಪಘಾತ ಆದ ವ್ಯಕ್ತಿಗೆ ಕನಿಷ್ಟ ಪ್ರಥಮ ಚಿಕಿತ್ಸೆ ಕೊಡಿಸುವ ಕೆಲಸ ಆದ್ರೂ ಆಗ್ಬೇಕು. ಆದ್ರೆ ಇಲ್ಲೊಬ್ಬ ಮಹಾಶಯ ಲಾರಿ ಹರಿಸಿ ವ್ಯಕ್ತಿಯೊಬ್ಬನ ಪ್ರಾಣ ತೆಗೆದು ಲಾರಿ ಸಮೇತ ಎಸ್ಕೇಪ್ ಆಗಿದ್ದ.
ಇದೀಗ ಎಸ್ಕೇಪ್ ಆಗಿದ್ದ ಲಾರಿ ಚಾಲಕನನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ರಾಮಸ್ವಾಮಿ ಬಂಧಿತ ಆರೋಪಿ. ಜುಲೈ 16ರ ಮಧ್ಯರಾತ್ರಿ 12.30 ರ ಸುಮಾರಿಗೆ ಮರಿಗೌಡ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ರಸ್ತೆ ದಾಟುವಾಗ ಅವರ ಮೇಲೆ ಲಾರಿ ಹರಿಸಿ ಚಾಲಕ ಪರಾರಿಯಾಗಿದ್ದ. ಲಾರಿ ಆ ವ್ಯಕ್ತಿ ತಲೆ ಮೇಲೆ ಹರಿದಿತ್ತು. ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮೃತ ವ್ಯಕ್ತಿ ಮರಗೆಲಸ ಮಾಡುವ ಕುಮಾರ್ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆಯ ಸಿಸಿಟಿವಿ ಆಧರಿಸಿ ಹಾಗೂ ಲಾರಿಯ ಟೈಯರ್ ಗುರುತಿನ ಮೇಲೆ ಹಿಟ್ ಅಂಡ್ ರನ್ ಮಾಡಿ ಎಸ್ಕೇಪ್ ಆಗಿದ್ದ ಟಿಪ್ಪರ್ ಚಾಲಕ ರಾಮಸ್ವಾಮಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
PublicNext
22/07/2022 04:01 pm