ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜ್ಯೋತಿಷಿ ಮನೆಯ ರಾಬರಿ ಪ್ರಕರಣ; ಮಹಿಳೆ ಸೇರಿ 6 ಜನ ಆರೋಪಿಗಳ ಬಂಧನ!

ಹಾಡಹಗಲೇ ಜ್ಯೋತಿಷಿ ಪ್ರಮೋದ್ ಕೈಕಾಲು ಕಟ್ಟಿ ದರೋಡೆ ಮಾಡಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಮಂದಿ ಆರೋಪಿಗಳನ್ನ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿಷಿ ಪ್ರಮೋದ್ ಆಪ್ತ ಸಹಾಯಕಿಯಾಗಿದ್ದ ಮೇಘನಾ ಹಾಗೂ ಈಕೆ ನೀಡಿದ ಸುಪಾರಿ ಮೇರೆಗೆ ಡಾಮಿನಿಕ್ ರಿಚರ್ಡ್, ರಾಜು ಸುರೇಶ್‌ ಪದಂ ಮತ್ತು ವಿನೋದ್ ಬಂಧಿತರಾಗಿದ್ದಾರೆ. ಬಂಧಿತರಿಂದ 22 ಲಕ್ಷ ಮೌಲ್ಯದ ಚಿನ್ನಾಭರಣ, 64 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನ ಸೀಜ್ ಮಾಡಿದ್ದಾರೆ.

ಬಂಧಿತೆಲ್ಲರೂ ಆಡುಗೋಡಿಯ ವಿನಾಯಕನಗರದವರಾಗಿದ್ದು, ನಾಲ್ಕೈದು ತಿಂಗಳ ಹಿಂದೆ ಶಾಸ್ತ್ರ ಕೇಳಲು ಪ್ರಮೋದ್ ಬಳಿ ಮೇಘನಾ ಬಂದಿದ್ದಳು. ಕಾಲಕ್ರಮೇಣ ಆತ್ಮೀಯತೆ ಬೆಳೆಸಿಕೊಂಡು ನಂತರ ಹಣದ ಸಹಾಯ ಮಾಡುವಂತೆ ಕೇಳಿದ್ದಳು.‌ ಸದ್ಯ ಹಣವಿಲ್ಲ ಎಂದು‌ ಪ್ರಮೋದ್ ಹೇಳಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಮೇಘನಾ ತನ್ನ ಏರಿಯಾದ ಯುವಕರನ್ನು ಒಗ್ಗೂಡಿಸಿ ದರೋಡೆಗೆ ಸಂಚು ರೂಪಿಸಿದ್ದಳು.

ಜುಲೈ 9 ರಂದು ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ಜ್ಯೋತಿಷಿ ಪ್ರಮೋದ್ ಅವರ ಮನೆಗೆ ಏಕಾಏಕಿ ನುಗ್ಗಿದ್ದ ಆರೋಪಿಗಳು ಅವರ ಕೈ ಕಾಲು ಕಟ್ಟಿ ಹಾಕಿ 400 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂ.ನಗದು ದೋಚಿ ಪರಾರಿಯಾಗಿದ್ದರು.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಕೆಂಗೇರಿ ಪೊಲೀಸರು ಇದೀಗ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮೇಘನಾ ಜ್ಯೋತಿಷಿ ಜೊತೆಯಲ್ಲಿರುವಾಗಲೇ ಈಕೆಯ ಅಣತಿಯಂತೆ ಆರೋಪಿಗಳು ಏಕಾಏಕಿ ನುಗ್ಗಿ ಮೇಘನಾಳ ಕೈಕಾಲು ಕಟ್ಟಿ ಜ್ಯೋತಿಷಿ ಪ್ರಮೋದ್ ಥಳಿಸಿದ್ದರು. ರಾಬರಿ ಬಳಿಕ ನಗರದ ಮನೆಯೊಂದರಲ್ಲಿ ಚಿನ್ನಾಭರಣ ಬಚ್ಚಿಟ್ಟಿದ್ರು. ಪೊಲೀಸರು ತನಿಖೆ ಬಂದಾಗಲೂ ಮೇಘನಾ ಏನೂ ಆಗದಂತೆ ನಟಿಸಿದ್ದಳು. ಸದ್ಯ ಪರಾರಿಯಾಗಿದ್ದ ಮೇಘನಾ ‌ಆ್ಯಂಡ್ ಟೀಂ ಪೊಲೀಸ್ರು ಬಂಧಿಸಿದ್ದಾರೆ.

====

Edited By :
PublicNext

PublicNext

14/07/2022 07:27 pm

Cinque Terre

34.13 K

Cinque Terre

0

ಸಂಬಂಧಿತ ಸುದ್ದಿ