ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶೋಕಿ ಜೀವನಕ್ಕೆ ಹೈಎಂಡ್ ಬೈಕ್ ಕಳ್ಳತನ; ಯುವಕ ಅಂದರ್

ಶೋಕಿ ಜೀವನಕ್ಕಾಗಿ ಹೈ ಎಂಡ್ ಬೈಕ್ ಗಳನ್ನು ಕದ್ದು ಮಜಾ ಉಡಾಯಿಸುತ್ತಿದ್ದ ಯುವಕನನ್ನು ರಾಜಾಜಿನಗರ ಪೊಲೀಸ್ರು ಬಂಧಿಸಿದ್ದಾರೆ. ಸಾಗರ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನಿಂದ 11 ಲಕ್ಷ ಮೌಲ್ಯದ 8 ಹೈ ಫೈ ಬೈಕ್ ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಆರೋಪಿ ಸಾಗರ್ 20ನೇ ವಯಸ್ಸಿಗೇ ದುಶ್ಚಟಕ್ಕೆ ಬಿದ್ದಿದ್ದ. ಕದ್ದ ಬೈಕ್ ನಲ್ಲಿ ಜಾಲಿಯಾಗಿ ಲಾಂಗ್ ಡ್ರೈವ್ ಹೋಗ್ತಿದ್ದ. ಬಳಿಕ ಆ ಬೈಕ್ ಗಳನ್ನು ಸಿಕ್ಕ ಬೆಲೆಗೆ ಮಾರುತ್ತಿದ್ದ. ಮತ್ತೆ ಹೈ ಫೈ ಬೈಕ್ ಗಳನ್ನು ಕಳ್ಳತನ‌ ಮಾಡ್ತಿದ್ದ. ಈತ ವಿದ್ಯಾರಣ್ಯಪುರ, ರಾಜಾಜಿನಗರ, ಕೊಡಿಗೆ ಹಳ್ಳಿ ಸೇರಿದಂತೆ ಹಲವು ಠಾಣೆ ವ್ಯಾಪ್ತಿಗಳಲ್ಲಿ ತನ್ನ ಕೈ ಚಳಕ ತೋರಿ ತಲೆ‌ಮರೆಸಿಕೊಂಡಿದ್ದ.

Edited By :
PublicNext

PublicNext

29/06/2022 06:39 pm

Cinque Terre

40.9 K

Cinque Terre

0

ಸಂಬಂಧಿತ ಸುದ್ದಿ