ಯುವಕರ ವಿಲ್ಹಿಂಗ್ ನೋಡಿದ್ರೆ ನಿಮ್ಮ ಎದೆ ಝಲ್ ಎನ್ನುತ್ತೆ. ಡೇ ಟೈಂ ಸಾಲದು ಅಂತ ನೈಟ್ ಟೈಂನಲ್ಲೂ ವೀಲಿಂಗ್ ಪುಂಡರು ಪುಂಡಾಟ ತೋರುತ್ತಿದ್ದಾರೆ.
ಓಲ್ಡ್ ಏರ್‌ಪೋರ್ಟ್ ರೋಡ್‌ನಲ್ಲಿ ಮೂರು ಪುಂಡರು ಸ್ಕೂಟರ್‌ನಲ್ಲಿ ವೀಲಿಂಗ್ ಮಾಡೋ ದೃಶ್ಯ ಮೊಬೈಲ್‌ನಲ್ಲಿ ಸರೆಯಾಗಿದೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ವಾಹನ ದಟ್ಟನೆ ಇರುವ ವೇಳೆಯಲ್ಲೇ ಯುವಕರು ವೀಲಿಂಗ್ ಹುಚ್ಚಾಟ ತೋರಿದ್ದಾರೆ. ಅಷ್ಟೇ ಅಲ್ಲದೆ ಹೆಲ್ಮೆಟ್ ಧರಿಸದೇ ಒವರ್ ಸ್ಪೀಡ್ ಆಗಿ ಅಡ್ಡಾದಿಡ್ಡಿ ಬೈಕ್ ಓಡಿಸಿದ್ದಾರೆ. ಯುವಕರ ಹುಚ್ಚಾಟದಿಂದ ಇತರೇ ವಾಹನ ಸವಾರರಿಗೆ ಸಂಕಷ್ಟ ಅನುಭವಿಸುವಂತಾಗಿದೆ.
ರೀಲ್ಸ್ ಶೋಕಿಗಾಗಿ ನಕಲಿ ನಂಬರ್ ಫ್ಲೇಟ್ ಅಳವಡಿಸಿಕೊಂಡು ಯುವಕರು ವೀಲಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಏರಿಯಾದಲ್ಲಿ ವೀಲಿಂಗ್ ಹುಚ್ಚಾಟ ನಡೆಸುವವರ ಬಗ್ಗೆ ಸಾರ್ವಜನಿಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಕೂಡ ಮನವಿ ಮಾಡಿದ್ದಾರೆ.
PublicNext
23/06/2022 07:40 pm