ಆ ಗ್ಯಾಂಗ್ ಕಳ್ಳತನಕ್ಕೆ ಸ್ಕೆಚ್ ಹಾಕಿ ಫೀಲ್ಡ್‌ಗೆ ಇಳಿದ್ರೆ ಮುಗೀತು ಬೇಟೆ ಹೊಡ್ಕೊಂದು ಬರೋದು ಫಿಕ್ಸ್. ಅದಕ್ಕೆ ಸಾಕ್ಷಿ ಎಂಬಂತೆ ಈ ಖತರ್ನಾಕ್ ಗ್ಯಾಂಗ್ ಪಕ್ಕಾ ಫ್ಯಾಮಿಲಿ ಕಸ್ಟಮರ್‌ಗಳಂತೆ ಸೀರೆಕೊಳ್ಳುವ ನೆಪದಲ್ಲಿ ಬಟ್ಟೆ ಅಂಗಡಿಗಳಿಗೆ ಎಂಟ್ರಿ ಕೊಟ್ಟು ಕಳ್ಳತನಕ್ಕೆ ಇಳಿಯುತ್ತೆ, ದುಬಾರಿ ಬೆಲೆ ಹೈಕ್ವಾಲಿಟಿ ಬಟ್ಟೆಗಳನ್ನ ಆಯ್ಕೆ ಮಾಡಿ ಬಿಡಿಗಾಸು ಕೊಡದೆ ಕ್ಷಣಾರ್ಧದಲ್ಲೇ ಎಗರಿಸಿ ಎಸ್ಕೇಪ್ ಆಗ್ತಾರೆ. ಅಷ್ಟಕ್ಕೂ ಏನಿದು ಪ್ರಕರಣ? ಈ ಘಟನೆ ನೆಡೆದಿದ್ದಾದರೂ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ..
ಈ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನೊಮ್ಮೆ ಸರಿಯಾಗಿ ನೋಡಿ ಮಟಮಟ ಮಧ್ಯಾಹ್ನ ಬಟ್ಟೆ ಅಂಗಡಿಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಈ ರೀತಿ ಅಟೆನ್ಷನ್ ಡೈವರ್ಷನ್ ಮಾಡಿ ಕಳ್ಳತನ ನೆಡೆದದ್ದು, ಬೆಂಗಳೂರು ಹೆಸರಘಟ್ಟರಸ್ತೆಯ ಹಾವನೂರು ಬಡಾವಣೆಯ ಜ್ಯೋತಿ ಎಂಬುವರ ತನುಶ್ರೀ ಕ್ರಿಯೇಟಿವ್ ಕಲೆಕ್ಷನ್ ಹೆಸರಿನ ಬಟ್ಟೆ ಅಂಗಡಿಯಲ್ಲಿ.
ಈ ಗ್ಯಾಂಗ್ ಮಧ್ಯಾಹ್ನ ಊಟದ ಸಂದರ್ಭದಲ್ಲೇ ಅಂಗಡಿ ಕೆಲಸದವರ ಸಂಖ್ಯೆ ಕಡಿಮೆ ಇರುವುದನ್ನ ನೋಡಿಕೊಂಡು ಎಂಟ್ರಿ ಕೊಟ್ಟು, ಅವರು ಬರ್ತಾರೆ ಇವರು ಬರ್ಬೇಕು ಅಂತ ಟೈಂ ಪಾಸ್ ಮಾಡಿ ಕೊನೆಗೆ ಅಲ್ಲಿನ ಕೆಲಸಗಾರರ ಗಮನ ಬೇರೆಡೆ ಸೆಳೆದು ಬೆಲೆ ಬಾಳುವ ಬಟ್ಟೆಗಳನ್ನ ಎಸ್ಕೇಪ್ ಮಾಡ್ತಾರೆ. ಸದ್ಯ ತನುಶ್ರೀ ಕ್ರಿಯೇಟಿವ್ ಕಲೆಕ್ಷನ್ಸ್ ಬಟ್ಟೆ ಅಂಗಡಿಯಲ್ಲಿ ಸುಮಾರು 80 ಸಾವಿರ ರೂ. ಮೌಲ್ಯದ ಬಟ್ಟೆಗಳನ್ನ ಈ ಗ್ಯಾಂಗ್ ಕದ್ದಿದ್ದಾರೆ.
ಈ ಸಂಬಂಧ ಬಟ್ಟೆ ಅಂಗಡಿ ಮಾಲೀಕರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣವಷ್ಟೇ ಅಲ್ಲ, ಇದೇ ರೀತಿಯ ಅದೆಷ್ಟೋ ಅಟೆನ್ಷನ್ ಡೈವರ್ಷನ್ ಪ್ರಕರಣಗಳು ನೆಡೆದಿವೆ. ಎಂಎಸ್ ಪಾಳ್ಯ, ಬಾಗಲಗುಂಟೆ, ಪೀಣ್ಯಾ ಠಾಣಾ ವ್ಯಾಪ್ತಿಲ್ಲಿ ತಲಾ 1 ಪ್ರಕರಣ, ಮಾದನಾಯಕನಹಳ್ಳಿ ಠಾಣಾ ವ್ಯಾಪಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸ್ರು ಸಿಸಿಕ್ಯಾಮರಾ ದೃಶ್ಯಾವಳಿಗಳನ್ನ ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
PublicNext
10/06/2022 08:25 pm