ನಾನು ದೊಡ್ಡ ಪ್ರಮಾದ ಮಾಡಿದ್ದೇನೆ. ಆ ಹುಡುಗಿಗೆ ಆಸಿಡ್ ಹಾಕಬೇಕು ಅಂತ ಕನಸು ಮನಸಲ್ಲೂ ಯೋಚಿಸಿರಲಿಲ್ಲ. ನಾನು ಇಂತಹ ಅನ್ಯಾಯ ಮಾಡಬಾರದಿತ್ತು. ನಾನು ಮಾಡಿರೋದು ತಪ್ಪು. ಹೀಗಂತ ಆ್ಯಸಿಡ್ ನಾಗ ಪೊಲೀಸರ ಮುಂದೆ ಪಶ್ಚಾತ್ತಾಪದ ಮಾತುಗಳನ್ನ ಆಡಿದ್ದಾನೆ.
ಕಾಮಾಕ್ಷಿಪಾಳ್ಯ ಪೋಲೀಸರು ಆ್ಯಸಿಡ್ ಆರೋಪಿ ನಾಗೇಶನ ಸ್ಟೇಟ್ ಮೆಂಟ್ ದಾಖಲಿಸಿದ್ದು, ವಿಚಾರಣೆ ವೇಳೆ ಆಸಿಡ್ ಎರಚಿದ್ದು ತಪ್ಪು ಅಂತ ನಾಗೇಶ್ ಒಪ್ಪಿಕೊಂಡಿದ್ದಾನೆ. ಆಕೆ ಮೇಲೆ ಆಸಿಡ್ ಹಾಕಬಾರದಿತ್ತು. ಆದರೆ ನನಗೆ ಸಿಗದಿದ್ದು, ಬೇರೆಯವರಿಗೆ ಸಿಗಬಾರದು ಅನ್ನೋ ಹೊಟ್ಟೆಕಿಚ್ಚಿನಲ್ಲಿ ಹಾಕಿಬಿಟ್ಟೆ. ಹಾಕಿದ ಮರುಕ್ಷಣ ಮನಪರಿವರ್ತನೆ ಆಯ್ತು. ಹೆದರಿಕೆ ಆಯ್ತು. ನಾನು ಮಾಡಿದ ತಪ್ಪಿಗೆ ಸದ್ಯ ನನಗೆ ಸಿಕ್ಕಿರೋ ಶಿಕ್ಷೆ ಕಡಿಮೆ. ಇನ್ನೂ ಶಿಕ್ಷೆ ಆಗಬೇಕು ಅಂತ ನಾಗೇಶ ಕಣ್ಣೀರು ಹಾಕಿದ್ದಾನೆ.
ಇನ್ನೂ ಈ ಘಟನೆ ಆದ್ಮೇಲೆ ಮೊದಲು ಸಾಯೋಣ ಅಂದ್ಕೊಂಡೆ. ಆದ್ರೆ ಆಗ ಭಯ ಆಯ್ತು. ಈ ಹಿಂದೆ ನಾನು ಯುವತಿ ಅಕ್ಕಪಕ್ಕದ ಮನೆಯಲ್ಲೇ ಇದ್ವಿ. ಆಕೆ ನನ್ನ ಜೊತೆ ಚೆನ್ನಾಗಿ ಮಾತಾಡೋದನ್ನ ನೋಡಿ ನನ್ನ ಮೇಲೆ ಲವ್ ಇದೆ ಅಂದ್ಕೊಂಡೆ. ಆದ್ರೆ ಅವಳಿಗೆ ನನ್ನ ಮೇಲೆ ಲವ್ ಇರಲಿಲ್ಲ ಅನ್ನೋದು ಆಮೇಲೆ ಗೊತ್ತಾಯ್ತು. ನಂತರ ನಮ್ಮ ಮನೆಯವರು ಕೂಡ ಸ್ವಲ್ಪ ದೂರ ಮಾಡೋಕೆ ನೋಡಿದ್ರು. ಅವಳು ಓದೋ ಕಾಲೇಜಿನಲ್ಲೆ ಹುಡುಗರನ್ನ ಇಟ್ಟಿದ್ದೆ. ಆಕೆ ಹಿಂದೆ ಯಾರಾದ್ರು ಬಿದ್ರೆ ವಾರ್ನ್ ಮಾಡ್ತಿದ್ದೆ.
ಇನ್ನೂ ಯಾವ ಕಾರಣಕ್ಕೂ ಇಂತಹ ತಪ್ಪು ಮಾಡಲ್ಲ. ಶಿಕ್ಷೆ ಅನುಭವಿಸಿಕೊಂಡು, ಒಳ್ಳೆಯವನಾಗಿರ್ತೀನಿ, ಮದುವೆ ಕೂಡಾ ಆಗಲ್ಲ ಅಂತ ನಾಗ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಇನ್ನೂ ಆಸಿಡ್ ದಾಳಿ ಕುರಿತು ನಾಗೇಶನ ವಿಚಾರಣೆ ನಡೆಸಿರೋ ಪೊಲೀಸರು ಇಂದು ಸ್ಥಳ ಮಹಜರ್ ಕೂಡ ನಡೆಸಿದ್ದಾರೆ.
Kshetra Samachara
04/06/2022 12:10 pm