ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಇಂದು ಬ್ಯಾಡರಹಳ್ಳಿ ಠಾಣೆಗೆ ಅನಂತರಾಜು ಸ್ನೇಹಿತೆ ಠಾಣೆಗೆ ಹಾಜರಾಗಿ ಅನಂತರಾಜು ಪತ್ನಿ ಸುಮಾ ವಿರುದ್ಧ ದೂರು ದಾಖಲಿಸಿದರು. ಆದರೆ ರೇಖಾ ನೀಡಿದ ದೂರನ್ನು ಪೊಲೀಸರು ಕೇವಲ ಎನ್‌ಸಿಆರ್ ದಾಖಲಿಸಿದರು. ಇದರ ಜೊತೆಗೆ ಹನಿಟ್ರಾಪ್ ಆರೋಪಿ ಅನ್ನೋ ಹಣೆ ಪಟ್ಟಿಕಟ್ಟಿದ್ದಾರೆ ಎಂದು ಬೇಸರಗೊಂಡ ರೇಖಾ ಠಾಣೆಯಲ್ಲಿ ಕಣ್ಣೀರಿಟ್ಟಿದ್ದಾರೆ.
ಬಳಿಕ ಹೊರಬಂದ ರೇಖಾ ಬಸ್‌ಗೆ ಸಿಲುಕಿ ಆತ್ಮಹತ್ಯೆ ಗೆ ಯತ್ನಿಸಿದರು. ಈ ವೇಳೆ ರೇಖಾ ಸಂಬಂಧಿಯೊಬ್ಬರು ಅವರನ್ನು ರಸ್ತೆಯಿಂದ ಹೊರಗಡೆ ತಂದು ಸಮಾಧಾನಪಡಿಸಿದರು.
PublicNext
01/06/2022 05:27 pm