ಬಾ ನಲ್ಲೆ ಮಧುಚಂದ್ರ ಕೆ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿಮಾದಲ್ಲಿ ನಾಯಕ ನಟಿ ಕಾಲೇಜ್ ವ್ಯಾನ್ ಡ್ರೈವರ್ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳಂತೆ ನಾಯಕ ಹನಿಮೂನ್ ನೆಪದಲ್ಲಿ ನಾಯಕಿಯನ್ನ ಹಿಮಾಲಯದಿಂದ ನೂಕಿ ಸಾಯಿಸೋ ಕಥಾಹಂದರ ಅದು.
ಸದ್ಯ ನಗರದಲ್ಲೂ ಇಂಥಹದ್ದೇ ಒಂದು ಘಟನೆ ನಡೆದಿದೆ. ಹೆಂಡತಿ ಟಾರ್ಚರ್ ಕೊಡ್ತಾಳೆ ಹಾಗು ಆಕೆಗೆ ಪರ ಪುರುಷನ ಜೊತೆ ಸಂಬಂಧ ಇದೆ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿಯನ್ನೇ ಕೊಂದು ಪೊಲೀಸ್ ಠಾಣೆ ಮೆಟ್ಟಿಲೇರಿ ಪತ್ನಿ ಮಿಸ್ಸಿಂಗ್ ಅಂತ ಡ್ರಾಮ ಆಡಿದ್ದ.
ಬಾ ನಲ್ಲೆ ಮಧುಚಂದ್ರ ಕೆ ಚಿತ್ರದಂತೆ ಪತಿ ಪ್ಲಾನ್ ಮಾಡಿದ್ದು ಅದರಲ್ಲಿ ಸಕ್ಸಸ್ ಆಗಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ . ಯಸ್ ಪೃಥ್ವಿರಾಜ್ ಎಂಬಾತ ತನ್ನ ಪತ್ನಿ ಜ್ಯೋತಿ ಎಂಬಾಕೆಯನ್ನ ಮೊದಲು ಆಕೆಯ ವೇಲ್ ನಿಂದಲೇ ಉಸಿರುಗಟ್ಟಿಸಿ ಕೊಲೆ ಮಾಡಿ ಸಕಲೇಶಪುರದ ಗುಂಡ್ಯಾ ಬಳಿ ಎಸೆದು ಹೋಗಿದ್ದ. ನಂತರ ಮಡಿವಾಳ ಪೊಲೀಸ್ ಠಾಣೆಯಲ್ಲಿ ಹೆಂಡ್ತಿ ಕಾಣ್ತಿಲ್ಲ ಎಂದು ದೂರು ನೀಡಿದ್ದ.
ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿ ತನಿಖೆ ನಡೆಸುವ ವೇಳೆ ತನ್ನ ಹಾಗು ತನ್ನ ಮೊಬೈಲ್ ಮಾರುತಿ ನಗರದ ಮನೆಯಲ್ಲೇ ಇದೆ ಎಂಬ ಸತ್ಯ ಬಾಯ್ಬಿಟ್ಟಿದ್ದ. ಸಂಶಯಗೊಂಡ ಪೊಲೀಸರು ಮೊಬೈಲ್ ಗಳ ಸಿಡಿ ಆರ್ ಹಾಗು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಪೃಥ್ವಿರಾಜ್ ಪತ್ನಿ ಜೊತೆ ಹೊರ ಹೋಗಿರೋ ವಿಚಾರ ಗೊತ್ತಾಗುತ್ತೆ . ನಂತರ ಪೊಲೀಸರು ತಮ್ಮದೆ ಸ್ಟೈಲ್ ನಲ್ಲೊ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ . ಬೆಂಗಳೂರಿನಿಂದ ಝೂಂ ಕಾರನ್ನ ಬುಕ್ ಮಾಡಿ ಹೆಂಡತಿಯನ್ನ ಪುಸಲಾಯಿಸಿ ಟ್ರಿಪ್ ಗೆ ಕರ್ಕೊಂಡು ಹೋಗಿದ್ದ. ಮೊದಲು ಮಲ್ಪೆಗೆ ಕರೆದೊಯ್ದು ಹೆಂಡತಿಯನ್ನ ಮುಳುಗಿಸಿ ನ್ಯಾಚುರಲ್ ಡೆತ್ ಎಂದು ಬಿಂಬಿಸಲು ಮುಂದಾಗಿದ್ದ . ಅಲ್ಲಿ ನೀರಿಗೆ ಇಳಿಯುವಂತಿಲ್ಲ ಎಂಬ ಬೋರ್ಡ್ ನೋಡಿದ ಬಳಿಕ ಪ್ಲಾನ್ ಚೈಂಜ್ ಮಾಡಿದ್ದ . ನಂತರ ಸೀದಾ ಶಿರಾಡಿ ಘಾಟ್ ರಸ್ತೆಯ ಮೂಲಕ ಗುಂಡ್ಯಾಗೆ ಬಂದು ಅಲ್ಲಿ ಆಕೆಯ ವೇಲ್ ನಿಂದ ಉಸಿರುಗಟ್ಟಿಸಿ ಕೊಂದು ಹಾಕಿದ್ದ. ನಂತರ ಜ್ಯೋತಿಯ ಶವವನ್ನ ಅಲ್ಲಿಂದ ಬಿಸಾಕಿ ನಗರಕ್ಕೆ ಬಂದು ದೂರು ದಾಖಲಿಸಿದ್ದ.
ಇಷ್ಟೆಲ್ಲಾ ಕೃತ್ಯಕ್ಕೂ ಪೃಥ್ವಿರಾಜ್ ಹೊಸ ಮೊಬೈಲ್ ಹಾಗು ಸಿಮ್ ಬಳಕೆ ಮಾಡಿದ್ದಾನೆ . ಪೊಲೀಸರಿಗೆ ಸಿಗಬಾರದೆಂದು ಬೇಸಿಕ್ ಸೆಟ್ ಉಪಯೋಗಿಸಿದ್ದಾನೆ .ಇನ್ನು ಕೊಲೆಗೆ ಕಾರಣ ಕೇಳಿದಾಗ ಹಲವು ಸಂಗತಿ ಹೊರ ಬಿದ್ದಿದೆ. ಎರಡು ಬಾರಿ ಯೂಪಿಎಸ್ ಸಿ ಪರೀಕ್ಷೆ ಬರೆದಿದ್ದ ಜ್ಯೋತಿ ತನಗೆ ಸಾಕಷ್ಟು ಟಾರ್ಚರ್ ಕೊಡ್ತಿದ್ಲು, ಅಷ್ಟೆ ಅಲ್ಲ ಆಕೆಗೆ ಪರ ಪುರುಷನ ಜೊತೆ ಸಂಪರ್ಕ ಇತ್ತು.ಕೇಳೊದಕ್ಕೆ ಹೋದ್ರೆ ತನ್ನ ಜೊತೆ ಗಯ್ಯಾಳಿಯಂತೆ ವರ್ತನೆ ಮಾಡ್ತಿದ್ಲು. ಹೀಗಾಗಿ ಕೊಲೆ ಮಾಡ್ದೆ ಎಂದು ಒಪ್ಪಿಕೊಂಡಿದ್ದಾನೆ.
PublicNext
17/08/2022 07:40 pm