ಆನೇಕಲ್: ರಸ್ತೆ ಬದಿಯಲ್ಲಿದ್ದ ಗಿಡಗಳನ್ನು ರಾತ್ರೋರಾತ್ರಿ ತೆರವು ಮಾಡಿದ್ದಲ್ಲದೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆ ಜೆಸಿಬಿ ಮೂಲಕ ಗಿಡಗಳನ್ನು ಕಿತ್ತು ಹಾಕಿರುವ ಘಟನೆ ಆನೆಕಲ್ ಚಂದಾಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ ಜಾಹಿರಾತು ಫಲಕಗಳಿಗೆ ರಸ್ತೆ ಮಧ್ಯದ ಗಿಡಗಳು ಅಡ್ಡವಾಗುತ್ತಿದೆ ಕುಂಟು ನೆಪ ಹೇಳಿ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಅಧಿಕಾರದ ದರ್ಪವನ್ನು ಮೆರೆದಿದ್ದಾರೆ .
ಆನೇಕಲ್ ಇಂದ ಬ್ಯಾಗಡದೇನಹಳ್ಳಿ ಗೇಟ್ ವರೆಗು ನಾಲ್ಕು ಪಥದ ರಸ್ತೆಯನ್ನು ನಿರ್ಮಾಣ ಮಾಡಿದ್ದು ರಸ್ತೆಯ ಮಧ್ಯೆ ವಿದ್ಯುತ್ ಕಂಬಗಳು ಹಾಗು ಅಕ್ರಮ ಜಾಹಿರಾತು ಫಲಕಗಳು ಅವುಗಳ ಮಧ್ಯೆ ಗಿಡಗಳನ್ನು ನೆಡಲಾಗಿತ್ತು. ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ತಿಲಕ್ ಗೌಡ ರಸ್ತೆಯಲ್ಲಿ ವಾಹನಗಳು ಓಡಾಡುವ ವಾಹನಗಳಿಗೆ ಅಡ್ಡಿಯಾಗುತ್ತಿದೆ ಎಂದು ಕುಂಟು ನೆಪ ಮುಂದಿಟ್ಟುಕೊಂಡು ಅನಧಿಕೃತವಾಗಿ ಹಾಕಿರುವ ಜಾಹಿರಾತು ಫಲಕಗಳಿಗೆ ಅನುಕುಲವಾಗುವಂತೆ ರಾತ್ರಿ ಜೆಸಿಬಿ ಮೂಲಕ ಗಿಡಗಳನ್ನು ಕಿತ್ತುಹಾಕಿದ್ದಾರೆ.
ಹಾಗಾದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೆಟ್ಟಿರುವ ಗಿಡಗಳು ವಾಹನಗಳಿಗೆ ಅಡ್ಡಿಯಾಗುವುದಿಲ್ಲವೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ . ಈ ರಸ್ತೆ ಮಧ್ಯ ಇರುವ ಜಾಹಿರಾತು ಫಲಕಗಳಿಗಳಲ್ಲಿ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಅಲೈಯನ್ಸ್ ವಿಶ್ವವಿದ್ಯಾಲಯ ಇದ್ದು ಬಹುತೇಕ ಜಾಹಿರಾತು ಫಲಗಳು ಈ ವಿಶ್ವವಿದ್ಯಾಲಯದ್ದೆ ಆಗಿದೆ. ಅಷ್ಟೇ ಅಲ್ಲದೆ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕಹಾಗಡೆ ಗ್ರಾಮದ ಸದಸ್ಯರು ಆಗಿರುವ ತಿಲಕ್ ಅಲೈಯನ್ಸ್ ಕಾಲೇಜ್ ನ ನಾಮ ಫಲಕಗಳಿಗಾಗಿ ರಸ್ತೆ ಮಧ್ಯ ಇರುವ ಗಿಡಗಳನ್ನು ತೆರವು ಮಾಡಿದ್ರ ಎಂಬುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸಂಬಂಧ ಪಟ್ಟ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗು ಗ್ರಾಮ ಪಂಚಾಯತಿ ಅಧಿಕಾರಿಗಳು ಸಾರ್ವಜನಿಕರಿಗೆ ಉತ್ತರ ನೀಡ ಬೇಕಿದೆ.
Kshetra Samachara
23/07/2022 05:59 pm