ಬೆಂಗಳೂರು: ಜೈಲಿನಿಂದ ಬಿಡುಗಡೆಯಾದ ಸರಿಯಾಗಿ ಹದಿನೈದು ದಿನಗಳು ಕಳೆದಿಲ್ಲ. ಅದಾಗಲೇ ಮಾರಕಾಸ್ತ್ರ ಝಳಪಿಸಿದ್ದ ಕುಖ್ಯಾತ ರೌಡಿ ಸಹೋದರರನ್ನ ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ನಟೋರಿಯಸ್ ಗಳಾಗಿ ಗುರುತಿಸಿಕೊಂಡಿರುವ ಸಂಜು ಹಾಗೂ ವೀರು ಬಂಧಿತ ಸಹೋದರರಾಗಿದ್ದು, ಇಬ್ಬರು ಕುಳ್ಳು ರಿಜ್ವಾನ್ ಸಹಚರರಾಗಿದ್ದಾರೆ.
ಸಂಜು ಹಾಗೂ ವೀರು ಹದಿನೈದು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಬಳಿಕ ಒಂದು ವಾರದ ಹಿಂದಷ್ಟೆ ಮುನೇಶ್ವರ ಬ್ಲಾಕ್ ಬಳಿ ವಿರೋಧಿ ಬಣದ ಮನೋಜ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಗಿರಿನಗರ ಠಾಣಾ ಪೊಲೀಸರು ಸದ್ಯ ಆರೋಪಿ ಸಹೋದರರನ್ನ ಬಂಧಿಸಿದ್ದಾರೆ.
PublicNext
09/09/2022 01:19 pm