ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ  ಕಸದ ಲಾರಿಗೆ ಯುವಕ ಬಲಿ; ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ ಬಿಸಿ

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸದ ಲಾರಿಗೆ ಸಿಲುಕಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು. ಪ್ರತಿಭಟನೆಯ ಬಿಸಿಗೆ ಮಣಿದ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಮೃತ ಯುವಕನ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡುವುದಾಗಿ ಭರವಸೆ ನೀಡಿದರು.

32 ವರ್ಷದ ರಾಜು, ಇಂದು ಬೆಳಗ್ಗೆ ಕೆಲಸ ನಿಮಿತ್ತ ಬೈಕ್ ನಲ್ಲಿ ಹೊರಟಿದ್ದ. ಮಾವಿನಕುಂಟೆ ಗ್ರಾಮದಿಂದ ಹೊರಟ ರಾಜು ಕೆಲವೇ ಕಿ.ಮೀ. ಅಂತರದಲ್ಲಿ ಬಿಬಿಎಂಪಿ ಕಸದ ಲಾರಿಗೆ ಸಿಲುಕಿ ದುರಂತ ಸಾವಿಗೀಡಾದ.

ರಾಜು ಸಾವು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಅಪಘಾತ ಸ್ಥಳದಲ್ಲೇ ಜಮಾಯಿಸಿದ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು. ಶಾಸಕ ಟಿ. ವೆಂಕಟರಮಣಯ್ಯ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದರು.

ತಕ್ಷಣವೇ ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳು ಮೃತ ಯುವಕನ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡುವುದಾಗಿ ಲಿಖಿತ ಭರವಸೆ ನೀಡಿದರು. ಮುಂಗಡವಾಗಿ 5 ಲಕ್ಷ ಚೆಕ್ ಅನ್ನು ಮೃತ ಯುವಕನ ತಾಯಿಗೆ ಹಸ್ತಾಂತರ ಮಾಡಿದರು. ಪ್ರತಿಭಟನೆ ಕೈಬಿಟ್ಟ ಗ್ರಾಮಸ್ಥರು ಮೃತನ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದರು.

Edited By :
PublicNext

PublicNext

04/09/2022 11:06 pm

Cinque Terre

51.81 K

Cinque Terre

2

ಸಂಬಂಧಿತ ಸುದ್ದಿ