ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲಸಿದ್ದ ಬಾಂಗ್ಲ ಪ್ರಜೆಗಳು ಗಡಿಪಾರು

ಬೆಂಗಳೂರು: ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳನ್ನ ಡಿಪೋರ್ಟ್ ಮಾಡುವ ಕಾರ್ಯಕ್ಕೆ ಮಾದನಾಯಕನಹಳ್ಳಿ ಪೊಲೀಸರು ಸಿದ್ದತೆ ನಡೆಸಿದ್ದಾರೆ. ಅಕ್ರಮವಾಗಿ ನಗರದಲ್ಲಿ ನೆಲೆಯೂರಿದ್ದ ಆರು ಬಾಂಗ್ಲಾ ಪ್ರಜೆಗಳನ್ನ ಬಾಂಗ್ಲಾದೇಶಕ್ಕೆ ಇಂದು ಗಡಿಪಾರು ಮಾಡಿದ್ದಾರೆ.

ಮಾದನಾಯಕನಹಳ್ಳಿ ಲಕ್ಷ್ಮಿಪುರದಲ್ಲಿ ವಾಸವಿದ್ದ ಬಾಂಗ್ಲಾ ಪ್ರಜೆಗಳು ಗುಜರಿ, ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದರು. ಅಕ್ರಮ ವಾಸದ ಬಗ್ಗೆ ಮಾಹಿತಿ ಕಲೆಹಾಕಿದ್ದ ಮಾದನಾಯಕನಹಳ್ಳಿ ಪೊಲೀಸರು ಆಧಾರ್ ಕಾರ್ಡ್ ಮತ್ತು ಕೆಲ ದಾಖಲಾತಿಗಳನ್ನ ಪರಿಶೀಲಿಸಿದಾಗ ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ದೇಶದೊಳಗೆ ನುಸುಳಿರೋದು ಪತ್ತೆಯಾಗುತ್ತಿತ್ತು. ಸದ್ಯ ಎಲ್ಲಾ ಫಾರ್ಮಲಿಟಿಸ್ ಮುಗಿಸಿರುವ ಪೊಲೀಸರು ಇಂದು ರೈಲಿನಲ್ಲಿ ಆರು ಬಾಂಗ್ಲಾ ವಾಸಿಗಳನ್ನ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ತುರಂತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಹೌರಾಗೆ ಪ್ರಯಾಣ ಬೆಳಸಿ ಅಲ್ಲಿಂದ ಬಾಂಗ್ಲಾ ಬಾರ್ಡರ್‌ನಲ್ಲಿ ಬಾಂಗ್ಲಾ ಅಥಾರಿಟಿಗೆ ಅಕ್ರಮ ವಾಸಿಗಳ ಹಸ್ತಾಂತರ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

Edited By : Nagesh Gaonkar
PublicNext

PublicNext

29/08/2022 07:19 pm

Cinque Terre

42.36 K

Cinque Terre

1

ಸಂಬಂಧಿತ ಸುದ್ದಿ