ಆನೇಕಲ್ :ಸುಖ ಸುಮ್ಮನೆ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಕಾನೂನು ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡಿ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಖಡಕ್ ವಾರ್ನಿಂಗ್ ನೀಡಿದ್ದಾರೆ .
ಇನ್ನೇನು ಕೆಲವೇ ದಿನಗಳಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ ವತಿಯಿಂದ ಸಾರ್ವಜನಿಕರ ಸಭೆಯನ್ನು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದ ಕೆ.ಎಂ.ಎಸ್. ಕಲ್ಯಾಣ ಮಂಟಪದ ಆಯೋಜಿಸಲಾಗಿತ್ತು.ಇನ್ನು ಸಭೆಯಲ್ಲಿ ಗ್ರಾಮಗಳಲ್ಲಿ, ಇನ್ನು ಈ ಬಾರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸರು ಹದ್ದಿನ ಕಣ್ಣನ್ನ ಇಟ್ಟಿದ್ದಾರೆ ಅಲ್ಲದೆ ಕಾನೂನು ಉಲ್ಲಂಘನೆ ಮಾಡಿದ್ದಂತ ಸಂದರ್ಭದಲ್ಲಿ ಕಾನೂನು ಶಿಸ್ತು ಕೈಗೊಳ್ಳುವುದಾಗಿ ಖಡಕ್ ವಾರ್ನಿಂಗ್ ನೀಡಿದ್ದಾರೆ..
ಇನ್ನು ಸಾರ್ವಜನಿಕರ ಸಭೆಯಲ್ಲಿ ಎಸ್.ಪಿ. ಮಲ್ಲಿಕಾರ್ಜುನ್ ಬಾಲದಂಡಿ, ಅಡಿಶಿನಲ್ ಎಸ್ಪಿ ಪುರುಷೋತ್ತಮ್ ಮತ್ತು ಡಿವೈಎಸ್ಪಿ ಲಷ್ಮೀನಾರಾಯಣ, ಅತ್ತಿಬೆಲೆ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ವಿಶ್ವನಾಥ್, ಆನೇಕಲ್ ಇನ್ಸ್ ಪೆಕ್ಟರ್ ಚಂದ್ರಪ್ಪ, ಹೆಬ್ಬಗೋಡಿ ಇನ್ಸ್ ಪೆಕ್ಟರ್ ಜಗದೀಶ್, ಸರ್ಜಾಪುರ ಇನ್ಸ್ ಪೆಕ್ಟರ್ ಎಸ್.ಎಸ್. ಮಂಜು, ಸೂರ್ಯನಗರ ಇನ್ಸ್ ಪೆಕ್ಟರ್ ರಾಘವ್ ಗೌಡ, ಜಿಗಣಿ ಇನ್ಸ್ ಪೆಕ್ಟರ್ ಸುದರ್ಶನ್, ಬನ್ನೇರುಘಟ್ಟ ಇನ್ಸ್ ಪೆಕ್ಟರ್ ಉಮಾ ಮಹೇಶ್ ಮತ್ತು ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು ಮತ್ತು ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
Kshetra Samachara
25/08/2022 07:00 pm