ಆನೇಕಲ್: ಆನೇಕಲ್ ಸಮೀಪದ ಕಲ್ಕರೆ ಎಂಬ ಗ್ರಾಮದಲ್ಲಿ ಮಂಜುನಾಥ್ ರೆಡ್ಡಿ- ಭಾರತಿ ದಂಪತಿಯ 3 ವರ್ಷದ ಮಗುವನ್ನು ದುಷ್ಕರ್ಮಿಗಳು ಅಪಹರಿಸಲು ಯತ್ನಿಸಿದ್ದಾರೆ!
ದ್ವಿಚಕ್ರ ವಾಹನದಲ್ಲಿ ಇಬ್ಬರು ಖದೀಮರು ಬಂದು ಮಗುವಿನ ಓಡಾಟ ಗಮನಿಸಿದ್ದಾರೆ. ಮಗು ಮನೆಯ ಸಮೀಪದಲ್ಲಿರುವ ಅಂಗಡಿಗೆ ಹೋಗಿ ಬರುವಾಗ ಕಳ್ಳರು ಮಗುವನ್ನು ಅಪಹರಣ ಮಾಡಿದ್ದಾರೆ.
ಸ್ಥಳೀಯರು ಗಾಡಿಯನ್ನು ಹಿಂಬಾಲಿಸಿ, ಅಟ್ಟಿಸಿಕೊಂಡು ಹೋಗಿದ್ದಾರೆ. ಹೆದರಿದ ಕಳ್ಳರು ಮಗುವಿನ ಸಮೇತವಾಗಿ ಗಾಡಿಯನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಆನೇಕಲ್ ಡಿವೈಎಸ್ಪಿ ಲಕ್ಷ್ಮೀನಾರಾಯಣ ಹಾಗೂ ಬನ್ನೇರುಘಟ್ಟ ಠಾಣೆ ಇನ್ ಸ್ಪೆಕ್ಟರ್ ವಿಶೇಷ ತಂಡ ರಚಿಸಿ ಕಳ್ಳರಿಗೆ ಬಲೆ ಬೀಸಿದ್ದಾರೆ.
ಇದ್ರಿಂದ ಮಗುವಿನ ಪೋಷಕರು ಸಮಾಧಾನದ ನಿಟ್ಟುಸಿರು ಬಿಟ್ಟರು. ಈ ಎಲ್ಲ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
- ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
23/08/2022 10:48 am