ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸರ ಭಯವಿಲ್ಲದೆ ಮಚ್ಚು ಹಿಡಿದು ಹೊಡೆದಾಡಿದ ಯುವಕರು.!

ಬೆಂಗಳೂರು: ಯುವಕರಿಬ್ಬರು ಕೈಯಲ್ಲಿ ಮಚ್ಚು ಹಿಡಿದು ಹೊಡೆದಾಡಿಕೊಂಡ ಘಟನೆ ಬೆಂಗಳೂರಿನ ಜಯನಗರ ತಿಲಕ್ ನಗರದಲ್ಲಿ ನಡೆದಿದೆ. ಇಬ್ಬರ ಗಲಾಟೆಯಲ್ಲಿ ಓರ್ವ ಯುವಕ ತನ್ನ ಕೈಯಲ್ಲಿ ಮಚ್ಚು ಹಿಡಿದು ಸಾರ್ವಜನಿಕರ ಮುಂದೆ ಹೊಡೆದಾಡಿಕೊಂಡಿದ್ದಾರೆ. ಇವರಿಬ್ಬರ ಹೊಡೆದಾಟ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ನಗರ ಪೊಲೀಸ್ ಆಯುಕ್ತರಿಗೆ ಸ್ಥಳೀಯರು ಕಳಿಸಿಕೊಟ್ಟಿದ್ದಾರೆ.

ಇದೇ ರೀತಿ ಆಗಾಗ ಯುವಕರು ಕೈಯಲ್ಲಿ ಮಚ್ಚು, ಲಾಂಗ್ ಹಿಡಿದು ಹೊಡೆದಾಟ ನಡೆಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದಾರೆ. ಈ ಪುಂಡ ಯುವಕರನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಕೊಲೆ ಮಾಡಬಹುದೆಂದು ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ನಗರ ಪೊಲೀಸರು ಈ ಯುವಕರ ವಿರುದ್ಧ ಕ್ರಮ ಕೈಗೊಳ್ಳಬೇಕು.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

22/08/2022 03:15 pm

Cinque Terre

28.06 K

Cinque Terre

0

ಸಂಬಂಧಿತ ಸುದ್ದಿ