ಬೆಂಗಳೂರು: ಆ ಏರಿಯಾದ ಜನರಿಗೆ ಅವನದ್ದೇ ಟೆನ್ಶನ್. ಯಾಕಂದ್ರೆ ಅವನು ಏರಿಯಾದಲ್ಲಿ ಎಂಟ್ರಿ ಕೊಟ್ಟರೆ ಸಾಕು.. ರಾತ್ರಿ ನಿಲ್ಲಿಸಿದ ಬೈಕ್ ಹಾಗೆಯೇ ಇರುತ್ತೆ. ಆದರೆ ಬೈಕ್‌ನಲ್ಲಿ ಇರಬೇಕಾದ ಬ್ಯಾಟರಿ ಮಾತ್ರ ಕ್ಷಣದಲ್ಲಿ ಮಾಯ ಆಗಿರುತ್ತೆ.
ಇವನು ಬರುವ ಸಮಯ ಗೊತ್ತಾಗಲ್ಲ. ಹೋಗುವ ಸಮಯ ಗೊತ್ತಾಗಲ್ಲ. ಆದರೆ ಇವನ್ನು ಏರಿಯಾದಲ್ಲಿ ಎಂಟ್ರಿ ಕೊಟ್ಟಮೇಲೆ ಬೈಕ್‌ನಲ್ಲಿ ಬ್ಯಾಟರಿ ಮಾತ್ರ ಇರುವುದಿಲ್ಲ ಅಷ್ಟರ ಮಟ್ಟಿಗೆ ಬ್ಯಾಟರಿ ಕಳ್ಳತನ ಮಾಡುವುದ್ರಲ್ಲಿ ಈತ ಎತ್ತಿದ ಕೈ. ಅದು ಬೆಳಗ್ಗಿನ ಸಮಯದಲ್ಲಿ ಬಂದು ನಿಮ್ಮ ಮನೆಯ ಮುಂದೆ ನಿಲ್ಲಿಸಿದ ನಿಮ್ಮ ಬೈಕ್‌ನ ಬ್ಯಾಟರಿಯನ್ನು ಕದ್ದು ಹೋಗ್ತಾನೆ.
ಅಂದಹಾಗೆ ಮೊನ್ನೆ ರಾತ್ರಿ ನಗರದ ಬಿಟಿಎಂ ಲೇಔಟ್‌ನ ಸೆಕೆಂಡ್ ಸ್ಟೇಜ್ ಬಳಿ ಮನೆಯ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ ಬೈಕ್‌ಗಳು ಹಾಗೆ ಇವೆ. ಆದರೆ ಬೈಕ್‌ಗಳಿಗೆ ಇರಬೇಕಾದ ಬ್ಯಾಟರಿಗಳು ಕಳವು ಆಗಿದ್ದನ್ನು ಕಂಡು ಬೈಕ್ ಮಾಲೀಕರು ಆತಂಕಗೊಂಡಿದ್ದರು. ಇನ್ನು ಮೊನ್ನೆ ಒಂದೇ ದಿನ ಏರಿಯಾದ ಅಕ್ಕ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ ಸುಮಾರು ಹತ್ತಕ್ಕೂ ಹೆಚ್ಚು ಬೈಕ್ ಗಳ ಬ್ಯಾಟರಿಗಳು ಕಳ್ಳತನ ಆಗಿವೆ ಎನ್ನಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ನಮ್ಮ ಏರಿಯಾದಲ್ಲಿ ಜಾಸ್ತಿ ಆಗ್ತಿವೆ. ಅದರಲ್ಲೂ ಟೂ ವೀಲರ್‌ಗಳ ಬ್ಯಾಟರಿಗಳನ್ನು ಒಬ್ಬ ಬಂದು ಕದ್ದು ಹೋಗ್ತಿದ್ದಾನೆ. ಹಾಗೆ ವಾಹನಗಳ ಹ್ಯಾಂಡಲ್ ಮುರಿದು ಬೈಕ್‌ಗಳನ್ನು ಕೂಡ ಕದ್ದು ಹೋಗಿದ್ದಾನೆ. ಆತ ಬೆಳಗ್ಗಿನ ಸಮಯದಲ್ಲಿ ಮೋಪೆಡ್ ವೆಹಿಕಲ್‌ನಲ್ಲಿ ಬಂದು ಬೈಕ್ ಬ್ಯಾಟರಿಗಳನ್ನು ಕದ್ದು ಹೋಗ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಕೊಡಬೇಕು ಕೂಡಲೇ ಕ್ರಮವನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಬಿಟಿಎಂ ಲೇಔಟ್‌ನ ವಾಸಿಗಳು ಕಳೆದ ಎರಡು ಮೂರು ತಿಂಗಳ ನಿಂದ ಬೈಕ್ ಬ್ಯಾಟರಿ ಗಳು ಕಳ್ಳತನ ಕಂಡು ರಾತ್ರಿ ಸಮಯದಲ್ಲಿ ಮನೆಯ ಮುಂದೆ ಬೈಕ್ ನಿಲ್ಲಿಸಲು ಭಯ ಪಟ್ಟಿದ್ದಾರೆ. ಅದು ಒಬ್ಬನೇ ಬಂದು ಹೀಗೆ ಮಾಡ್ತಿದ್ದಾನೆ ಎನ್ನುವ ಗೊಂದಲದಲ್ಲಿ ಇದ್ದು ಪೋಲಿಸರು ಕಳ್ಳನನ್ನು ಯಾವಾಗ ಹಿಡಿಯುತ್ತಾರೆ ಎನ್ನುವುದು ಬೈಕ್ ಬ್ಯಾಟರಿಗಳನ್ನು ಕಳೆದುಕೊಂಡವರಗೆ ದೊಡ್ಡ ಪ್ರಶ್ನೆ ಆಗಿದೆ ಅಂದರೆ ತಪ್ಪಾಗಲಾರದು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
17/08/2022 07:56 pm