ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಮಾದೇಶ ಫಿಲ್ಮ್ ಪ್ರಡ್ಯೂಸರ್ ಗೋವರ್ಧನ್ ಮೂರ್ತಿಗೆ ಸುಪ್ರೀಂಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಕೊಲೆ ಕೇಸ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಗೋವರ್ಧನ್ 2008 ಅಕ್ಟೋಬರ್ 7 ರಂದು ನಡೆದಿದ್ದ ಶೂಟೌಟ್ ಕೇಸ್ ನಲ್ಲಿ ಸಜಾ ಆಗಿತ್ತು. ಬಾಗಲೂರಿನ ಫಾರ್ಮ್ ಹೌಸ್ ನಲ್ಲಿ ನಟ ವಿನೋದ್ ಎಂಬಾತನ ಮೇಲೆ ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಶೂಟ್ ಮಾಡಿ ಕೊಂದಿದ್ದ ಗೋವರ್ಧನ್ ಮೂರ್ತಿ.
2012ರಲ್ಲಿ ಗೋವರ್ದನ್ ಮೂರ್ತಿಗೆ ಜೀವಾವಧಿ ಶಿಕ್ಷೆ ನೀಡಿದ್ದ ಸೆಷನ್ಸ್ ಕೋರ್ಟ್ 6 ವರ್ಷ 2 ತಿಂಗಳು ಜೈಲು ಶಿಕ್ಷೆ ಅನುಭವಿಸಿರುವ ಗೋವರ್ಧನ್ ಮೂರ್ತಿ ಸದ್ಯ ಬಿಡುಗಡೆ ಭಾಗ್ಯ ಸಿಕ್ಕಿದೆ. 2008ರಲ್ಲಿ ಇಡೀ ಬೆಂಗಳೂರನ್ನೇ ನಡುಗಿಸಿದ್ದ ವಿನೋದ್ ಶೂಟೌಟ್ ಕೇಸ್ ಶೂಟ್ ಮಾಡಿ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ ಗೋವರ್ಧನ್ ಮೂರ್ತಿ ಸದ್ಯ ಬೇಲ್ ಆಗಿದ್ದು ಇನ್ನೂ ಮೂರು ನಾಲ್ಕು ದಿನದಲ್ಲಿ ಜೈಲಿಂದ ಗೋವರ್ದನ್ ಮೂರ್ತಿ ಬಿಡುಗಡೆಯಾಗಲಿದ್ದಾನೆ.
PublicNext
11/08/2022 12:21 pm