ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಿತ್ಯ ನಡೆಯುತ್ತಿರುವ ಅತಿಹೆಚ್ಚು ಕ್ರೈಂ ಅಂದ್ರೆ ಅದು ಮೊಬೈಲ್ ರಾಬರಿ. ಕ್ಷಣಮಾತ್ರದಲ್ಲಿ ಹೋಗುವವರನ್ನು ಗಮನಿಸುತ್ತಾರೆ. ಈ ವೇಳೆ ಏಕಾಏಕಿ ಕೈಯಲ್ಲಿರುವ ಮೊಬೈಲ್ ಎಗರಿಸಿ ಎಸ್ಕೇಪ್ ಆಗುತ್ತಾರೆ.
ಸದ್ಯ ನಗರದ 74 ಕಡೆ ರಾಬರಿ ಮಾಡಿದ್ದ ಐದು ಜನರ ಗ್ಯಾಂಗ್ ಅನ್ನು ಕಬ್ಬನ್ ಪಾರ್ಕ್ ಪೊಲೀಸರು ಲಾಕ್ ಮಾಡಿದ್ದಾರೆ . ಹೌದು ಇವರೇ ನೋಡಿ ಈ ಖದೀಮರು. ಮಹಮ್ಮದ್ ಉಸ್ಮಾನ್ , ಮಹಮ್ಮದ್ ಹುಸೇನ್, ತಬ್ರೇಜ್ ಖಾನ್.ಜುನೈದ್. ಮತ್ತು ಇರ್ಫಾನ್ ಪಾಷ ಬಂಧಿತ ಆರೋಪಿಗಳಾಗಿದ್ದಾರೆ.
ಈ ಗ್ಯಾಂಗ್ ನ ಎಲ್ಲಾ ಸದಸ್ಯರು ಬೆಂಗಳೂರಿನ ಜೆಜೆನಗರ ಮೂಲದ ನಿವಾಸಿಗಳು. ಈ ಐವರ ಗ್ಯಾಂಗ್ ಇದುವರೆಗೆ ಬರೊಬ್ಬರಿ 74 ರಾಬರಿ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ.
ಪ್ರಮುಖವಾಗಿ ಕಬ್ಬನ್ ಪಾರ್ಕ್. ಅಶೋಕನಗರ ,ಮಾಗಡಿ ರೋಡ್.ಸುದ್ದಗುಂಟೆ ಪಾಳ್ಯ, ಹೈಗ್ರೌಂಡ್ಸ್ .ಶ್ರೀರಾಮಪುರ ಸೇರಿ ನಗರದ ಹಲವು ಭಾಗದಲ್ಲಿ ಈ ಗ್ಯಾಂಗ್ ತಮ್ಮ ಕೈ ಚಳಕ ತೋರಿದೆ.
PublicNext
09/08/2022 08:56 pm