ಬೆಂಗಳೂರು: ಕೋಟ್ಯಂತರ ರೂ.ಆಸ್ತಿ ಸಂಪಾದನೆ ಮಾಡಿರುವ ಕಾಂಗ್ರೆಸ್ ನ ಯೂಸೂಫ್ ಶರೀಫ್ @ ಕೆಜಿಎಫ್ ಬಾಬು ಚಾಮರಾಜಪೇಟೆ ಶಾಸಕ ಜಮೀರ್ ಗೆ ನೀಡಿದ ಮೂರು ಕೋಟಿ ಸಾಲ ಕಂಟಕವಾಗತೊಡಗಿದೆ.
ಕೆಜಿಎಫ್ ಬಾಬು ವಿರುದ್ಧ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪಿಎಂಎಲ್‌ಎ ಪ್ರಕರಣದಡಿ ಜಪ್ತಿ ಮಾಡುವ ವಸ್ತುಗಳ ಅಧಿಕಾರ ಹೊಂದಿರುವ ಅಜ್ಯುಡಿಕ್ಟಿಂಗ್ ಕಮಿಟಿಯು ಆಗಸ್ಟ್ 10ರೊಳಗೆ ಉತ್ತರ ನೀಡುವಂತೆ ಕೆಜಿಎಫ್ ಬಾಬುಗೆ ಶೋಕಾಶ್ ನೊಟೀಸ್ ನೀಡಿದೆ.
ಐಎಂಎ ಪ್ರಕರಣದಲ್ಲಿ ಅವ್ಯವಹಾರ ನಡೆಸಿದ ಆರೋಪದಡಿ ಕಳೆದ ವರ್ಷ ಇ.ಡಿ. ಶಾಸಕ ಜಮೀರ್ ಮನೆ ಮೇಲೆ ದಾಳಿ ನಡೆಸಿದ್ದಾಗ ಕೆಜಿಎಫ್ ಬಾಬು 3 ಕೋಟಿ ರೂ.ಸಾಲ ನೀಡಿರುವುದು ತನಿಖೆ ವೇಳೆ ಕಂಡು ಬಂದಿತ್ತು. ಇದೇ ಜಾಡಿನ ಮೇರೆಗೆ ಇಡಿ ಅಧಿಕಾರಿಗಳು ಬಾಬು ಮನೆ ಮೇಲೆ ದಾಳಿ ನಡೆಸಿ ಚಿನ್ನಾಭರಣ ಹಾಗೂ ದುಬಾರಿ ಮೌಲ್ಯದ ವಾಚ್ ಸೇರಿದಂತೆ ಇನ್ನಿತರ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿತ್ತು.
ಜಪ್ತಿಯಾದ ಚಿನ್ನಾಭರಣ ಬಿಡಿಸಿಕೊಳ್ಳಲು ಬಾಬು ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ED ಅಧಿಕಾರಿಗಳು ಐಎಂಎ ಹಗರಣದಲ್ಲಿ ಆರೋಪಿಯಾಗಿರುವ ಮೊಹಮ್ಮದ್ ಮನ್ಸೂರ್ ಖಾನ್ ಜಮೀರ್ ಗೆ 63 ಕೋಟಿ ನೀಡಿದ್ದರು. ಇದೇ ವ್ಯಕ್ತಿಗೆ ಕೆಜಿಎಫ್ ಬಾಬು 3 ಕೋಟಿ ಸಾಲ ನೀಡಿದ್ದು ಇದನ್ನ ವಾಪಸ್ ಸಹ ಪಡೆದುಕೊಂಡಿಲ್ಲ.
ತನಿಖೆಯಲ್ಲಿ ಐಷಾರಾಮಿ ಜೀವನ ನಡೆಸಲು ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ಕಂಡು ಬಂದಿದೆ. ಬಾಬು ಅವರಿಂದ ಜಪ್ತಿಯಾದ ವಸ್ತುಗಳನ್ನು ನೀಡದಂತೆ ಇ.ಡಿ.ಯು ಕಮಿಟಿಗೆ ಸಲ್ಲಿಸಿದ್ದ ಆಕ್ಷೇಪಣೆಯಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಆಗಸ್ಟ್ 10 ರೊಳಗೆ ಲಿಖಿತ ಉತ್ತರ ನೀಡಲು ಕೆಜಿಎಫ್ ಬಾಬುಗೆ ಅಜ್ಯುಡಿಕ್ಟಿಂಗ್ ಕಮಿಟಿಯಿಂದ ಶೋಕಾಸ್ ನೊಟೀಸ್ ಜಾರಿ ಮಾಡಿದೆ. ಕೆಜಿಎಫ್ ಬಾಬು ಉತ್ತರ ನೀಡಿದ ನಂತರ ವಶಪಡಿಸಿಕೊಂಡ ವಸ್ತುಗಳ ವಾಪಸ್ಸು ನೀಡುವ ಬಗ್ಗೆ ಸಮಿತಿ ತೀರ್ಮಾನಿಸಲಿದೆ.
Kshetra Samachara
05/08/2022 10:39 pm