ವರದಿ- ಗೀತಾಂಜಲಿ
ಬೆಂಗಳೂರು: ಇಷ್ಟು ದಿನ ರಸ್ತೆಮೇಲೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ, ನೋ ಪಾರ್ಕಿಂಗ್‌ನಲ್ಲಿ ಗಾಡಿ ಪಾರ್ಕ್ ಮಾಡಿದ್ರೆ ಮಾತ್ರ ಸಂಚಾರ ಪೊಲೀಸರು ಕೇಸ್ ಹಾಕುತ್ತಿದ್ದರು. ಆದರೆ ಇನ್ಮೂಂದೆ ಫುಟ್ ಪಾತ್ ಅತಿಕ್ರಮಣ ಮಾಡಿದ್ರೂ ಕೇಸ್ ಬೀಳೋದು ಪಕ್ಕಾ.
ಸಿಆರ್‌ಪಿಸಿ 107 ಭದ್ರತಾ ಕಾಯ್ದೆಯಡಿ ಕೇಸ್ ದಾಖಲು ಮಾಡ್ತಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ಅದೆಷ್ಟೇ ಹೇಳಿದರೂ ಅಂಗಡಿ ಮುಂಗಟ್ಟುಗಳ ಮುಂದೆ ಫುಟ್ ಅತಿಕ್ರಮಣ ಮಾಡಿ ವಾಹನಪಾರ್ಕ್ ಮಾಡೋದು, ಅಂಗಡಿಯ ವಸ್ತುಗಳನ್ನ ಇಡಲಾಗುತ್ತೆ. ಇಂತವರ ಮೇಲೆ ಇನ್ಮುಂದೆ ಕೇಸ್ ಬುಕ್ ಆಗುತ್ತೆ. ಸದ್ಯ ರಾಜಾಜಿನಗರ ಸಂಚಾರ ಪೊಲೀಸ್ರು ಇಬ್ಬರು ಅಂಗಡಿ ಮಾಲಿಕರ ಮೇಲೆ ಕೇಸ್ ದಾಖಲಿಸಿ ಉತ್ತರ ವಿಭಾಗ ಕಾನೂನು ಸುವ್ಯವಸ್ಥೆ ಡಿಸಿಪಿ ಮುಂದೆ ಆರೋಪಿಗಳನ್ನ ಹಾಜರು ಪಡಿಸಿದ್ದಾರೆ. ಆರೋಪಿಗಳಿಗೆ ಪಾದಚಾರಿ ಮಾರ್ಗ ಬ್ಲಾಕ್ ಮಾಡಂತೆ ಎಚ್ಚರಿಕೆ ನೀಡಿ ಶರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಒಟ್ಟಿನಲ್ಲಿ ಇನ್ನೂ ಮುಂದೆಯೂ ಫುಟ್ ಪಾತ್ ಮೇಲೆ ಪಾರ್ಕ್ ಮಾಡೋದು ಅಂಗಡಿ ಹಾಕೋ ಮುನ್ನ ಸ್ವಲ್ಪ ಎಚ್ಚರ ವಹಿಸಿದ್ರೆ ಒಳಿತು. ಇಲ್ಲದಿದ್ರೆ ನೀವೂ ಕೇಸು ಕೋರ್ಟ್ ಅಂತಾ ಸುತ್ತಬೇಕಾಗುತ್ತೆ.
Kshetra Samachara
04/08/2022 07:21 pm