ಬೆಂಗಳೂರು: ಇವತ್ತಿನ ದಿನಗಳಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳು ಬೆಳಿಗ್ಗೆ ಅನ್ನೋದರಲ್ಲಿ ಕಣ್ಮರೆಯಾಗಿರುತ್ತವೆ. ದಿನ ಬೆಳಗಾದರೆ ಪೊಲೀಸ್ ಸ್ಟೇಷನ್‌ಗಳಲ್ಲಿ ಸರ್ ನನ್ನ ಬೈಕ್ ಅಲ್ಲಿ ನಿಲ್ಲಿಸಿದ್ದೆ, ಇಲ್ಲಿ ನಿಲ್ಲಿಸಿದ್ದೆ, ಬಂದ್ ನೋಡಿದ್ರೆ ಇರಲಿಲ್ಲ ಅನ್ನೋ ಕಂಪ್ಲೈಂಟ್‌ಗಳೇ ಹೆಚ್ಚು. ಅದರಲ್ಲೂ ಪೂರ್ವ ವಿಭಾಗದ ಐದಾರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡ್ತಿದ್ದ ಈ ಗ್ಯಾಂಗ್ ಅನ್ನ ಕೈ ಚಳಕಕ್ಕೆ ಸವಾರರು ಬೈಕ್‌ಗಳನ್ನ ಕಳೆದುಕೊಂಡು ಕಣ್ಣೀರು ಹಾಕಿದ್ರೆ, ಮತ್ತೊಂದೆಡೆ ಪೊಲೀಸರ ನಿದ್ದೆಗೆಡಿಸಿದ್ರು. ಹೀಗಾಗಿ ಆರೋಪಿಗಳ ಪತ್ತೆಗೆ ಫೀಲ್ಡ್ ಗಿಳಿದ ಪೊಲೀಸರು, ಕೆಲ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆರೋಪಿಗಳಿಗೆ ಹೆಡೆಮುರಿ ಕಟ್ಟಿ ಜೈಲಿಗೆ ಕಳಿಸಿದ್ದಾರೆ.
ಇನ್ನು ಬಂಧಿತ ಆರೋಪಿಗಳ ಪೈಕಿ ಕೆಜಿ ಹಳ್ಳಿ ಪೊಲೀಸ್ರ ಅತಿಥಿಯಾಗಿರೋ ಶಾಹೀದ್ ಅಫ್ರೀದಿ ಮತ್ತು ಶಾಹಿದ್ ಪಾಷಾ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳನ್ನ ಕದ್ದು, ಗ್ಯಾರೇಜ್ ನಲ್ಲಿ ಬಿಡಿ ಭಾಗಗಳಾಗಿ ಬೇರ್ಪಡಿಸಿ, ಮಾರಾಟ ಮಾಡ್ತಿದ್ರಂತೆ. ಹೀಗಾಗಿ ಕಳವಾದ ಬೈಕ್ ಗಳನ್ನ ಪತ್ತೆಯಚ್ಚೋದು ಪೊಲೀಸ್ರಿಗೆ ಕೆಲ ಕಾಲ ಕ್ಲಿಷ್ಟಕರ ಪರಿಸ್ಥಿತಿ ಎದುರಾಗಿತ್ತು. ಆದ್ರೆ, ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣದಲ್ಲಿ ಆರೋಪಿಗಳು ಸೆರೆಯಾಗಿದ್ದ ಸಿಸಿಟಿವಿ ದೃಶ್ಯಾವಳಿಗಳಿಂದಾಗಿ ಆರೋಪಿಗಳು ಪೊಲೀಸ್ರಿಗೆ ಸಿಕ್ಕಿ ಬಿದ್ದಿದ್ದು, ಅವ್ರ ಖತರ್ನಾಕ್ ಕೆಲ್ಸವೂ ಬೆಳಕಿಗೆ ಬಂದಿದೆ.
ಸದ್ಯ ಸಿಕ್ಕ ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿರುವ ಪೂರ್ವ ವಿಭಾಗದ ವಿಶೇಷ ಪೊಲೀಸ್ರ ತಂಡ ಆರೋಪಿಗಳಿಂದ ವಿವಿಧ ಬಗೆ ಸುಮಾರು 78 ಬೈಕ್ ಗಳನ್ನ ವಶಪಡಿಸಿಕೊಂಡಿರೋ ಪೊಲೀಸ್ರು ಆರೋಪಿಗಳನ್ನ ವಶಕ್ಕೆ ಪಡೆದು ಮತ್ತಷ್ಟು ಪ್ರಕರಣಗಳ ಭೇದಿಸಿಲು ತನಿಖೆ ಮುಂದುವರೆಸಿದ್ದಾರೆ.
PublicNext
31/07/2022 05:14 pm