ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಸ್ ಐ ಪರೀಕ್ಷೆ ಮುಗಿದ ನಾಲ್ಕನೇ ದಿನಕ್ಕೆ 22 ಓಎಂಆರ್ ಶೀಟ್ ತಿದ್ದಿದ ಆರೋಪಿಗಳು

ಬೆಂಗಳೂರು: ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಕೋರ್ಟ್ ಗೆ ಸಿಐಡಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಚಾರ್ಜ್ ಶೀಟ್ ನಲ್ಲಿ ಒಂದಷ್ಟು ಸ್ಫೋಟಕ ಅಂಶಗಳು ಹೊರಬಂದಿವೆ. ಅದ್ರಲ್ಲಿ ಒಂದು ಅಂಶ ಅಂದ್ರೆ ಪರೀಕ್ಷೆ ಮುಗಿದ ಕೇವಲ ನಾಲ್ಕು ದಿನದಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿ ನಾಲ್ವರ ಸಿಬ್ಬಂದಿ ತಂಡವು ಸ್ಟ್ರಾಂಗ್ ರೂಮ್ ಗೆ ತೆರಳಿ 22 ಎಂಎಂಆರ್ ಶೀಟ್ ತಿದ್ದುಪಡಿ ಮಾಡಿದ್ದಾರೆ ಎಂದು ಸಿಐಡಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ನಮೂದಿಸಿದೆ.

ಬಂಧಿತ ಆರೋಪಿಗಳು ಮೂರು ಬಾರಿ ಪ್ರತ್ಯೇಕ ದಿನಗಳಲ್ಲಿ ಹೋಗಿ ಓಎಂಆರ್ ಶೀಟ್ ತಿದ್ದಿದ್ದಾರೆ. ಕಳೆದ ವರ್ಷ ಅಕ್ಟೋಬರ್ 7, 8 ಹಾಗೂ 16ರಂದು ಬೆಳಗ್ಗೆ 6ರಿಂದ 9.30 ವರೆಗೆ ಉತ್ತರಪತ್ರಿಕೆಗಳ ಟ್ಯಾಂಪರಿಂಗ್ ಕಾರ್ಯ ನಡೆಸಿದ್ದಾರೆ.

545 ಪಿಎಸ್ ಐ ನೇಮಕಾತಿಗಾಗಿ ಕಳೆದ ವರ್ಷ ಅಕ್ಟೋಬರ್ 3ರಂದು ಪೊಲೀಸ್ ಇಲಾಖೆಯು ಲಿಖಿತ ಪರೀಕ್ಷೆ ನಡೆಸಿತ್ತು. ಪರೀಕ್ಷೆ ಮುಗಿದ ಉತ್ತರಪತ್ರಿಕೆಗಳನ್ನು ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಮ್ ನಲ್ಲಿ ಭದ್ರವಾಗಿ ಇಡಲಾಗಿತ್ತು. ಇದರ ಉಸ್ತುವಾರಿಯನ್ನ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ವಹಿಸಿದ್ದರು. ಹೀಗಾಗಿ ಸ್ಟ್ರಾಂಗ್ ರೂಮ್ ಕೀ ಅವರ ಅಧೀನದಲ್ಲಿತ್ತು.

ಆರೋಪಿಗಳ ಪೂರ್ವಾಸಂಚಿನಂತೆ ಪರೀಕ್ಷೆ ಮುಗಿದ ನಾಲ್ಕು ದಿನಗಳ ಬಳಿಕ ಅಂದರೆ ಅ.5ರಂದು ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಪೌಲ್ ಅವರ ಕಚೇರಿಯ ಕೊಠಡಿಗೆ ಹೋಗಿ ಕಪಾಟಿನಲ್ಲಿದ್ದ ಸ್ಟ್ರಾಂಗ್ ರೂಮ್ ಬೀಗದ ಕೀ ತೆಗೆದುಕೊಂಡಿದ್ದಾರೆ.

ಅಕ್ಟೋಬರ್ 6 ಮಹಾಲಯ ಅಮಾವಾಸ್ಯೆ ಹಿನ್ನೆಲೆ ರಜೆ ಇದ್ದಿದ್ದರಿಂದ ಅ.7ರಂದು ಮುಂಜಾನೆ 6.30 ಕ್ಕೆ ಡಿವೈಎಸ್ಪಿ ಶಾಂತಕುಮಾರ್, ಎಫ್ ಡಿಎಗಳಾದ ಹರ್ಷ, ಶ್ರೀನಿವಾಸ್ ಹಾಗೂ ಕಾನ್ ಸ್ಟೇಬಲ್ ಶ್ರೀಧರ್ ಸಿಐಡಿ ಕಚೇರಿಗೆ ಹೋಗಿದ್ದರು.

ಕೃತ್ಯದ ಬಗ್ಗೆ ತಿಳಿಯದಂತೆ ಮೊದಲಿಗೆ ಸ್ಟ್ರಾಂಗ್ ರೂಂ ಸಿಸಿಟಿವಿ ಕ್ಯಾಮರ ಆಫ್ ಮಾಡಿದ್ದಾರೆ. ಶ್ರೀನಿವಾಸ್ ಹಾಗೂ ಶ್ರೀಧರ್ ಒಳಹೋದರೆ ಸ್ಟ್ರಾಂಗ್ ರೂಮ್ ಬಾಗಿಲು ಬಳಿ ಹರ್ಷ ಕಾವಲು ಕಾದಿದ್ದ.

ಮುಂಜಾನೆ 6.30ರಿಂದ 9.30ರವರೆಗೆ ಹಣ ನೀಡಿದ ಆಭ್ಯರ್ಥಿಗಳ ಒಎಂಅರ್ ಶೀಟ್ ತಿದ್ದಿದ್ದಾರೆ. ಅದೇ ರೀತಿ ಅ.8 ಹಾಗೂ 16 ರಂದು ಇದೇ ಅವಧಿಯಲ್ಲಿ ಉತ್ತರಪತ್ರಿಕೆಗಳ ಟ್ಯಾಂಪರಿಂಗ್ ಮಾಡಿದ್ದಾರೆ. ನಗರ ವ್ಯಾಪ್ತಿಯ 7 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ 22 ಪಿಎಸ್ ಐ ಆಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದುಪಡಿ ಮಾಡಿದ್ದು ಎಫ್ ಎಸ್ ಎಲ್ ವರದಿಯಲ್ಲಿ ಸಾಬೀತಾಗಿದೆ ಎಂದು ಆರೋಪಪಟ್ಟಿಯಲ್ಲಿ ಸಿಐಡಿ ಅಧಿಕಾರಿಗಳು ವಿವರಿಸಿದ್ದಾರೆ.

Edited By : Nirmala Aralikatti
PublicNext

PublicNext

29/07/2022 11:54 am

Cinque Terre

16.1 K

Cinque Terre

0

ಸಂಬಂಧಿತ ಸುದ್ದಿ