ನೆಲಮಂಗಲ: ಕ್ಯಾಂಟರ್ ವಾಹನದಲ್ಲಿ ಅಕ್ರಮವಾಗಿ ಗುಜರಾತ್‌ನಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 8 ಹಸುಗಳನ್ನ ಭಜರಂಗದಳ ಕಾರ್ಯಕರ್ತರು ರಕ್ಷಿಸಿದ್ದು, ಚಾಲಕ ಸೇರಿದಂತೆ ಮೂವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನೆಲಮಂಗಲ ನಗರದ ಕುಣಿಗಲ್ ವೃತ್ತದ ಬಳಿ ನಡೆದಿದೆ.
ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಗುಜುರಾತ್‌ನಿಂದ ಕೇರಳಕ್ಕೆ ಹಸುಗಳು ಸಾಗಾಟವಾಗ್ತಿದ್ದು, ಗುಜರಾತ್ ಮೂಲದ ಕ್ಯಾಂಟರ್ ವಾಹನ ಚಾಲಕ ಪಿಂಟು, ರಾಜು ಸೇರಿದಂತೆ ಮತ್ತೋರ್ವನನ್ನು ಹಿಡಿದ ಭಜರಂಗದಳ ಕಾರ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸದ್ಯ ವಾಹನವನ್ನ ಜಪ್ತಿ ಮಾಡಿ ಕೊಂಡ ಪೊಲೀಸರು ರಕ್ಷಿಸಲ್ಪಟ್ಟ 8 ಹಸುಗಳನ್ನ ಸದ್ಯ ತಾಲ್ಲೂಕಿನ ದಾಬಸ್‌ಪೇಟೆ ಸಮೀಪದ ವನಕಲ್ಲುಮಠದ ಗೋಶಾಲೆಗೆ ರವಾನಿಸಿದ್ದಾರೆ.
ಈ ಸಂಬಂಧ ಯಾವುದೇ ಸೂಕ್ತ ದಾಖಲೆ ಪತ್ರಗಳಿಲ್ಲದ ಕಾರಣಕ್ಕೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.
PublicNext
24/07/2022 07:52 pm