ಬೆಂಗಳೂರು: ಇತ್ತಿಚೇಗೆ ಬೆಂಗಳೂರು ನಗರದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಲಾಂಗು ಮಚ್ಚು ಹಿಡಿದು ಸಂಜೆಯಾದ್ರೆ ಸಾಕು ರಸ್ತೆಗಿಳಿಯೋ ಈ ಪುಂಡರು ಸಿಕ್ಕ ಸಿಕ್ಕವರನ್ನ ಬೆದರಿಸಿ ಹಣ ಮೊಬೈಲ್ ದೋಚುವುದು ಗಣನೀಯವಾಗಿ ಏರಿಕೆಯಾಗಿದೆ. ಆದ್ರೆ ಇಲ್ಲೊಂದು ಗುಂಪು ಸಂಜೆ ಅಲ್ಲ ಬೆಳ್ಳಂಬೆಳಿಗ್ಗೆ ಪೊಲೀಸ್ರ ಭಯವಿಲ್ಲದೆ ಪುಂಡಾಟಿಕೆ ಮೆರೆದಿದ್ದಾರೆ.
ಲಾಂಗ್ ತೋರಿಸಿ ರಾಬರಿ ನಡೆಸಿದ್ದಾರೆ ಹೌದು ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ರಾಬರಿ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಿಸಿಟಿವಿಯಲ್ಲಿ ಸೆರೆಯಾದ ಘಟನೆಗಳನ್ನಷ್ಟೇ ಪೊಲೀಸ್ರು ಎಫ್ ಐ ಆರ್ ಮಾಡ್ತಿದ್ದಾರೆ.
ನಿನ್ನೆ ಬೆಳಗ್ಗೆ 6 ಗಂಟೆ ಸುಮಾರಿಗೆ ಲಾಂಗ್ ತೋರಿಸಿ ರಾಬರಿ ನಡೆಸಿರೋ ಪ್ರಕರಣ ಡಿ.ಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಗೋಕುಲ ಲೇಔಟ್ ನಲ್ಲಿ ನಡೆದಿದೆ. ಮುಂಜಾನೆ ಹಾಲು ತರಲು ಬಂದಿದ್ದ ವ್ಯಕ್ತಿಯನ್ನ ಅಡ್ಡಗಟ್ಟಿ ಲಾಂಗ್ ತೋರಿಸಿ ಬೆದರಿಸಿ ನಂತರ ಮೊಬೈಲ್ ಹಾಗೂ ಹಣ ಕಿತ್ತು ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸ್ರು ಬಲೆ ಬೀಸಿದ್ದಾರೆ.
PublicNext
19/07/2022 11:12 am