ಬೆಂಗಳೂರು ದಕ್ಷಿಣ: ಕಾಡುಪ್ರಾಣಿಗಳನ್ನು ರಾತ್ರಿವೇಳೆ ಬೇಟೆ ಮಾಡಲು ಬಂದಿದ್ದ ಇಬ್ಬರ ಸೇರಿದಂತೆ ಒಬ್ಬನನ್ನು ಪೊಲೀಸ್ ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ತಟ್ಟಗುಪ್ಪೆ ಗ್ರಾಮದ ಜೋಸೆಫ್ ರಾಜು ಬಂಧಿತ ಆರೋಪಿ ಮತ್ತೊಬ್ಬ ಅರೋಪಿ ವಿಶಾಲ್ ಬಂಧನಕ್ಕಾಗಿ ಬಲೆ ಬೀಸಲಾಗಿದೆ.
ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ರಾಗಿಹಳ್ಳಿ ಗ್ರಾಮದ ತಟ್ಟಗುಪ್ಪೆ ಪ್ರದೇಶದಲ್ಲಿ ಇಬ್ಬರು ಬಂದೂಕು ಹಿಡಿದು ಬೇಟಿಗಾಗಿ ವನ್ಯಜೀವಿಗಳ ಕಾಲುದಾರಿಯಲ್ಲಿ ಹೊಂಚುಹಾಕಿ ಕುಳಿತಿದ್ದರಂತೆ ಆ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಆರೋಪಿ ಜೋಸೆಫ್ ರಾಜು ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಕಾಯ್ದೆ ಪ್ರಕಾರ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ ಪ್ರಭಾಕರ್ ಪ್ರಿಯದರ್ಶಿ ಉಪ ಅರಣ್ಯಾಧಿಕಾರಿ ವಿಶಾಲ್ ಪಾಟೀಲ್ ಸಹಾಯಕ ಅರಣ್ಯಾಧಿಕಾರಿ ಗುರುರಾಜ್ ಅರಣ್ಯಧಿಕಾರಿ ಬನ್ನೇರುಘಟ್ಟ ಅರಣ್ಯ ವಲಯ ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದರು.
Kshetra Samachara
16/07/2022 07:43 pm