ಬೆಂಗಳೂರು: ದೇವನಹಳ್ಳಿಯ ಐಶ್ವರ್ಯ ಬಡಾವಣೆಯಲ್ಲಿ ನೆನ್ನೆ ಸಂಜೆ ಮನೆಯೊಂದಕ್ಕೆ ನುಗ್ಗಿದ ಖದೀಮ ಒಂಟಿಯಾಗಿದ್ದ ಮಹಿಳೆಯ ಕತ್ತುಕೊಯ್ದು ಕೊಲೆ ಮಾಡಿ, ಚಿನ್ನಾಭರಣ ದೋಚಿಪರಾರಿಯಾಗಿದ್ದಾರೆ. ಮನೆಯವರೆಲ್ಲಾ ಕೆಲಸಕ್ಕೆ ಹೋಗಿದ್ದ ವೇಳೆ ಮನೆಯಲ್ಲಿದ್ದ ಅಂಚನಾ (57)ತುಳಸಿಯಾನ ಎಂಬ ಮಹಿಳೆಯ ಕೊಲೆಯಾಗಿದೆ.
ನೆನ್ನೆ ಸಂಜೆ ಕೃತ್ಯ ನಡೆದಿದ್ದು ರಾತ್ರಿ ವಿಷಯ ಬೆಳಕಿಗೆ ಬಂದಿದೆ. ಮಹಿಳೆಯ ಕತ್ತು ಕೊಯ್ದು ಬರ್ಭರವಾಗಿ ಕೊಲೆ ಮಾಡಿ, ಮನೆಯಲ್ಲಿದ್ದ 12 ಲಕ್ಷ ಮೌಲ್ಯದ ಚಿನ್ನಾಭರಣ, ನಾಲ್ಕು ಲಕ್ಷ ನಗದು ತೆಗೆದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗ್ತಿದೆ. ನೆನ್ನೆ ಸಂಜೆ ಮನೆಯವರು ಹಾರ್ಡ್‌ವೇರ್ ಅಂಗಡಿಗೆ ತೆರಳಿದ್ದ ವೇಳೆ ಹೊಂಚು ಹಾಕಿ ಕೃತ್ಯ ಎಸಗಲಾಗಿದೆ. ಮನೆಯಲ್ಲಿ ಒಂಟಿ ಮಹಿಳೆ ಇರೋದನ್ನ ಗಮನಿಸಿ ಪ್ಲಾನ್ ಮಾಡಿ ದುರುಳರು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಜಾಣ ಕೊಲೆಗಾರರು ಮನೆಲಿದ್ದ ಸಿಸಿಟಿವಿ ಡಿವಿಆರ್‌ಅನ್ನೆ ತೆಗೆದುಕೊಂಡು ಪರಾರಿಯಾಗಿದ್ದಾರೆ. ದೇವನಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..
PublicNext
16/07/2022 12:56 pm