Exclusive:-
ಬೆಂಗಳೂರು: ನಗರದಲ್ಲಿ ವೀಕ್ ಎಂಡ್ ಆದ್ರೆ ಸಾಕು, ಯುವ ಪೀಳಿಗೆಯನ್ನ ನಶೆಯಲ್ಲಿ ತೆಲಿಸೋಕೆ ಅಂತಾ ನಶೆಕೋರರು ಸಜ್ಜಾಗಿರ್ತಾರೆ. ವಾರದ ಬ್ಯುಸಿನೆಸ್ ಗಿಂತ ವಾರಾಂತ್ಯದ ಬ್ಯುಸಿನೆಸ್ ನಶೆಲೋಕದಲ್ಲಿ ಹೆಚ್ಚಾಗಿರುತ್ತೆ. ಸದ್ಯ ನಾಳಿನ ವೀಕ್ ಎಂಡ್ ಗೆ ನಶೆ ಏರಿಸಲು ಸಜ್ಜಾಗಿದ್ದ ಗಾಂಜಾ ಪೆಡ್ಲರ್‌ಅನ್ನ ಮಹದೇವಪುರ ವಲಯದ ಅಬಕಾರಿ ಅಧಿಕಾರಿಗಳು ಹೆಡೆ ಮುರಿಕಟ್ಟಿದ್ದಾರೆ.
ಪಕ್ಕದ ಆಂಧ್ರ ಪ್ರದೇಶದಿಂದ ಬಲ್ಕ್ ನಲ್ಲಿ ಗಾಂಜಾ ತಂದು ರಿಟೇಲ್ ಆಗಿ ಮಾರಾಟ ಮಾಡುವಾಗ ರೆಡ್ ಹ್ಯಾಂಡ್ ಆಗಿ ಅಬಕಾರಿ ಅಧಿಕಾರಿಗಳ ಕೈಗೆ ಲಾಕ್ ಆದ ಗಾಂಜಾ ಪೆಡ್ಲರ್ ದಿನೇಶ್ ಚಾಟ್ಲಾ, 33 ಕೆಜಿ ಗಾಂಜಾ ಸಮೇತ ಸಿಕ್ಕಿ ಬಿದ್ದಿದ್ದಾನೆ. ಅಬಕಾರಿ ಎಸ್ಪಿ ವೀರಣ್ಣ ಬಾಗೇವಾಡಿ ನೇತೃತ್ವದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಎ.ಎ.ಮುಜಾವರ್ ಆ್ಯಂಡ್ ಟೀಂ ಕಾರ್ಯಾಚರಣೆ ನಡೆಸಿ 24 ಲಕ್ಷ ಮೌಲ್ಯದ 33 ಕೆಜಿ ಗಾಂಜಾ ಕೃತ್ಯಕ್ಕೆ ಬಳಸಿದ್ದ ಒಂದು ಕಾರು ಮೊಬೈಲ್ ನ ಸೀಜ್ ಮಾಡಿದ್ದಾರೆ.
ಇನ್ನೂ ಆರೋಪಿ ದಿನೇಶ್ ಆಂಧ್ರದ ವೈಜಾಗ್ ನಿಂದ ಕಾರಿನಲ್ಲೇ ಗಾಂಜಾ ತಂದು ಮಹದೇಪುರ ,ವೈಟ್ ಫೀಲ್ಡ್ ಸುತ್ತಾ ಮುತ್ತಾ ನಡೆಯೋ ವೀಕ್ ಎಂಡ್ ಪಾರ್ಟಿಗಳಿಗೆ ಗಾಂಜಾ ಸಪ್ಲೈ ಮಾಡ್ತಿದ್ದ. ಇನ್ನೂ ಇದರ ಹಿಂದೆ ಯಾರೆಲ್ಲ ಇದ್ದಾರೆ. ಇಲ್ಲಿ ಯಾರಿಗೆ ಗಾಂಜಾ ಸಪ್ಲೈ ಮಾಡ್ತಿದ್ದ ಎಂದು ಅಬಕಾರಿ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
PublicNext
15/07/2022 09:09 pm