ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಮಾಜಿ ಖಜಾಂಚಿ ಪ್ರವೀಣ್ ಗೌಡರ ಮೇಲೆ ನಡೆದ ಹಲ್ಲೆ ಖಂಡಿಸಿ ಇಂದು ಆನೇಕಲ್ ವಕೀಲರ ಸಂಘ ಕೋರ್ಟ್ ಆವರಣದಲ್ಲಿ ಪ್ರತಿಭಟನೆ ನಡೆಸಿತು. ಅಲ್ಲದೆ, ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿರುವ ರಾಕೇಶ್ ಮತ್ತು ರಂಗನಾಥ್ ಗೆ ವಕಾಲತ್ತು ವಹಿಸಬಾರದು ಆಗ್ರಹಿಸಲಾಯಿತು.
"ವಕೀಲ ಪ್ರವೀಣ್ ಗೌಡ ಹಲಸೂರು ಗೇಟ್ ಬಳಿ ಹೋಗುತ್ತಿರುವಾಗ ನೋಡಿಕೊಂಡು ಹೋಗು ಎಂಬ ಕ್ಷುಲ್ಲಕ ಕಾರಣಕ್ಕೆ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಪ್ರವೀಣ್ ಗೌಡರ ಮೇಲೆ ಹಲ್ಲೆ ಮಾಡಿರೋದು ಬಹಳ ಬೇಸರ ತಂದಿದೆ. ಇತ್ತೀಚೆಗೆ ವಕೀಲರ ಮೇಲೆ ಹಲ್ಲೆ ಪ್ರಕರಣ ಹೆಚ್ಚಾಗಿದೆ. ಹೀಗಾಗಿ ವಕೀಲರ ಸುರಕ್ಷಾ ಕಾಯಿದೆಯನ್ನು ಸರ್ಕಾರ ಕೂಡಲೇ ಜಾರಿ ಮಾಡಬೇಕು ಎಂದು ವಕೀಲರಾದ ಫಟಾಫಟ್ ಪ್ರಕಾಶ್ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ವಕೀಲರು ಭಾಗಿಯಾಗಿದ್ದರು.
Kshetra Samachara
15/07/2022 08:23 pm