ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆನ್‌ ಲೈನ್ ಗೇಮ್ ನಲ್ಲಿ ಹಣ‌ ಹೋದ ಚಿಂತೆ; ಹೆಣವಾದ ಯುವಕ!

ನೆಲಮಂಗಲ: ಆನ್‌ ಲೈನ್ ಗೇಮ್ ನಲ್ಲಿ ಹಣ ಹೂಡಿ ಸೋತ ಯುವಕನೊಬ್ಬ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಮಾಚೋಹಳ್ಳಿಯಲ್ಲಿ ನಡೆದಿದೆ.

ಮಾಚೋಹಳ್ಳಿ ನಿವಾಸಿ ಪ್ರಸನ್ನ (22 ವರ್ಷ ) ಮೃತ ದುರ್ದೈವಿ ಆಗಿದ್ದಾನೆ. ಸಿಎನ್ಸಿ ಕೆಲಸ ನಿರ್ವಹಿಸುತ್ತಿದ್ದ ಪ್ರಸನ್ನ

ಆನ್‌ ಲೈನ್ ಗೇಮ್‌ ನಲ್ಲಿ ತನ್ನ ಸಂಬಳದ ಹಣ ಹೂಡಿ ಸೋತು ಹೋದ ಕಾರಣಕ್ಕೆ ನಿರಾಶನಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

15/07/2022 08:06 pm

Cinque Terre

53.42 K

Cinque Terre

1

ಸಂಬಂಧಿತ ಸುದ್ದಿ