ಯಲಹಂಕ: ಕೇಸ್ ಕೊಟ್ರೆ ಸೈನ್ ಹಾಕೋಕೆ ಕೈ ಇರಲ್ಲ. ಕಣ್ಣಿಗೆ ಕಂಡ್ರೆ ಎತ್ತಿಬಿಡ್ತೀನಿ. ಹೆಂಡ್ತಿ ಎದುರಲ್ಲೇ ಚಾಕು ಇಳಿಸಿಬಿಡ್ತೀನಿ. ನಿನ್ನ ರಕ್ತ ಕುಡಿದು ಬಿಡ್ತೀನಿ. ಕೇಸ್ ಆದ್ರೆ ಆರು ತಿಂಗಳು ಒಳಗಿದ್ದು ಹೊರಬರ್ತೀನಿ ಅಷ್ಟೆ. ಹೀಗೆ ತೀರ ಕೆಟ್ಟದಾಗಿ ರೌಡಿಶೀಟರ್ ಕಿರಣ್ ಎಂಬ ಆಸಾಮಿ ಮಣಿಕಂಟ ಎಂಬ ಯುವಕನಿಗೆ ಆವಾಜ್ ಹಾಕಿದ್ದಾನೆ.
ನಗರದ ಕುಖ್ಯಾತ ರೌಡಿಗಳಾದ ಲೊಡ್ಡೆ ಸೀನ, ಕಾಟನ್ ಪೇಟೆ ಪುಷ್ಪ ಎಲ್ಲರ ಜೊತೆ ಕಾಣಿಸಿಕೊಳ್ಳೊ ರೌಡಿಶೀಟರ್ ಕಿರಣನ ಧಮ್ಕಿಗೆ ವಿದ್ಯಾರಣ್ಯಪುರ ಪೊಲೀಸರೂ ಗಪ್ ಚುಪ್ ಆದ್ರಾ ಅನ್ನೋ ಅನುಮಾನ ಕಾಡ್ತಿದೆ. ಯಾಕಂದ್ರೆ ಬೆದರಿಕೆ ಪ್ರಕರಣದ ಸಂಬಂಧ FIR ಮಾಡದೆ 110 ಸೆಕ್ಷನ್ ಅಡಿ NCR ಮಾಡಿ ಕಳ್ಸಿದ್ದಾರೆ ಎಂಬ ಮಾತು ಕೇಳಿಬರ್ತಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಅನೂಪ್ ಶೆಟ್ಟಿ, ವಿದ್ಯಾರಣ್ಯಪುರ ಪೊಲೀಸರು NCR ದಾಖಲಿಸಿ ಕೋರ್ಟ್ ಅನುಮತಿಗೆ ಕಾಯ್ತಿದ್ದಾರೆ. ಬೆದರಿಕೆಗೆ FIR ಮಾಡುವಂತಿಲ್ಲ. ವಿದ್ಯಾರಣ್ಯಪುರ ಪೊಲೀಸರ ಬೇಜವಾಬ್ದಾರಿ ಎಂದೂ ಮೂದಲಿಸುವ ಅವಶ್ಯಕತೆ ಇಲ್ಲ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಮುಂದಿನ ಕ್ರಮ ಜರುಗಿಸುತ್ತೇವೆ ಅಂದಿದ್ದಾರೆ.
ಏನೇ ಆದ್ರೂ ಜನ ರಾಜಿ ಮಾಡಿ ಕಳಿಸೋ ಜಾಗವಾಯ್ತಾ ಪೊಲೀಸ್ ಸ್ಟೇಷನ್.? ಖಡಕ್ ಡಿಸಿಪಿ ಅನೂಪ್ ಶೆಟ್ಟಿ ಗಮನಕ್ಕೆ ಬಂದರೂ ಏಕೆ ಸೂಕ್ತ ಕ್ರಮ ಜರುಗಿಸುತ್ತಿಲ್ಲ ಎನ್ನುತ್ತಿದ್ದಾರೆ ಜನಸಾಮಾನ್ಯರು.
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ಯಲಹಂಕ..
PublicNext
15/07/2022 04:58 pm