ಬೆಂಗಳೂರು : ಖಡಕ್ಕಾಗಿ ಹೀಗೆ ಮೀಸೆ ಬಿಟ್ಟು ಪೋಸ್ ಕೊಡ್ತಿರೋ ಆಸಾಮಿಯ ಹೆಸರು ಮಂಜುನಾಥ್ ಅಂತ. BSF ಸೈನಿಕನಾಗಿ ದೇಶ ಸೇವೆ ಮಾಡಿರೋ ಈತ ತನ್ನ ಚಿಕ್ಕಪ್ಪನನ್ನೆ ಶೂಟೌಟ್ ಮಾಡಿ ಕುಖ್ಯಾತಿ ಪಡೆದಾತ.
ಇಷ್ಟು ಸಾಲದೆಂಬಂತೆ ಇದೀಗ ತಮ್ಮ ಮನೆಗೆ ಹೊಂದಿಕೊಂಡ ರೇಷ್ಮೆ ಇಲಾಖೆ ಜಮೀನಿನ ಕಬಳಿಕೆಗೆ ಯತ್ನಿಸಿ, ರೇಷ್ಮೆ ಇಲಾಖೆಗೆ ಸೇರಿದ ಎರಡು ಬಿಲ್ಡಿಂಗ್ ಡೆಮೊಲಿಷನ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ದೇಶ ಕಾಯೋ ಸೈನಿಕನ ಪಾಪಕೃತ್ಯಗಳಿಗೆ ಗ್ರಾಮಸ್ಥರೆ ಹೆದರಿದ್ದು, ಪೊಲೀಸರು ಇದೀಗ ರೌಡಿಶೀಟರ್ ಮಾಜಿ ಸೈನಿಕನಿಗೆ ಬೇಡಿ ಹಾಕಿದ್ದಾರೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ನಲ್ಲೂರು ಮಲ್ಲೇನಹಳ್ಳಿಯಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಎರಡು ಕ್ವಾಟ್ರಸ್ ಬಿಲ್ಡಿಂಗ್ಸ್ ನ ಜೆಸಿಬಿ ಮೂಲಕ ಕಳೆದ ಸೋಮವಾರ ಬೆಳಗ್ಗೆ ಡೆಮೊಲಿಷನ್ ಮಾಡಲಾಗಿದೆ. ರೇಷ್ಮೆ ಇಲಾಖೆಗೆ ಸೇರಿದ ಒಂದು ಎಕರೆ 19ಗುಂಟೆ ಜಾಗದಲ್ಲಿ ಹಳೆಯ ಕ್ವಾಟ್ರಸ್ ಗಳಿದ್ದವು.
ಈ ಜಾಗಕ್ಕೆ ಹೊಂದಿಕೊಂಡೆ ಮಂಜುನಾಥ್ ರವರ ಮನೆ ಜಮೀನಿದೆ. ದಿಕ್ಕಿಲ್ಲದ ರೇಷ್ಮೆ ಇಲಾಖೆ ಜಮೀನನ್ನು ಕಬಳಿಸಿದರೆ, ಯಾರೂ ಕೇಳಲ್ಲ ಎಂಬ ಹುದ್ದಟತನದಿಂದ ಮಂಜುನಾಥ್ ಜೆಸಿಬಿ ಮೂಲಕ ಸೋಮವಾರ ಎರಡು ರೇಷ್ಮೆ ಕ್ವಾಟ್ರಸ್ ಕಟ್ಟಡಗಳನ್ನು ಕೆಡವಲಾಗಿದೆ. ಈ ಬಗ್ಗೆ ರೇಷ್ಮೆ ಇಲಾಖೆ ಅಧಿಕಾರಿಗಳು ಸ್ಥಲಕ್ಕೆ ಭೇಟಿ ನೀಡಿ ಕಟ್ಟಡ ಕೆಡವಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಚನ್ನರಾಯಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಶರಣಪ್ಪ, ಇನ್ಸ್ಪೆಕ್ಟರ್ ವಿಜಯೇಂದ್ರ ಪ್ರಸಾದ್, DYSP ನಾಗರಾಜ್ ರವರ ತಂಡ ಬೆಂಗಳೂರು ಗ್ರಾಮಾಂತರ ಎಸ್.ಪಿ.ವಂಶೀಕೃಷ್ಣ ನೇತೃತ್ವದಲ್ಲಿ ತನಿಖೆ ಮುಂದುವರೆಸಿದೆ.
ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರು-ಮಲ್ಲೇನಹಳ್ಳಿ ನಿವಾಸಿ ಮಂಜುನಾಥ್@ ಮಿಲ್ಟ್ರೀ ಮಂಜ ತನ್ನ ಚಿಕ್ಕಪ್ಪನನ್ನೆ ಗನ್ ನಿಂದ ಶೂಟ್ ಮಾಡಿ ಕೊಂದಿದ್ದ.
ಮತ್ತೊಬ್ಬ ಚಿಕ್ಕಪ್ಪನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇದರಿಂದ BSF ನಿವೃತ್ತಯೋಧ ಮಂಜುನಾಥ್ ವಿರುದ್ಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲಿ ರೌಡಿಶೀಟರ್ ಸಹ ತೆರೆಯಲಾಗಿದೆ. ಇಂದು ಬೆಳಗ್ಗೆ ನಡೆದ ರೌಡಿಪೆರೇಡ್ ನಲ್ಲಿ ಭಾಗವಹಿಸಿದ್ದ.
ಇದೀಗ ಸರ್ಕಾರಿ ರೇಷ್ಮೆ ಇಲಾಖೆ ಜಮೀನಿನ ಮೇಲೆ ಕಣ್ಣಾಕಿ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಮುಂದೆ ಅದೇನಾಗ್ತದೊ ದೇವರೇ ಬಲ್ಲ.
PublicNext
13/07/2022 10:19 pm